ಮೊಹಮದ್ ಶಮಿ ಮತ್ತು ಹಸೀನ್ ಜಹಾನ್( ಸಂಗ್ರಹ ಚಿತ್ರ) 
ಕ್ರಿಕೆಟ್

ಕಥುವಾ ರೇಪ್ ಕೇಸ್ ಗೂ, ನನ್ನ ಪ್ರಕರಣಕ್ಕೂ ಹೋಲಿಕೆಯಿದೆ: ಕ್ರಿಕೆಟಿಗ ಮೊಹಮದ್ ಶಮಿ ಪತ್ನಿ

ಕಥುವಾ ಅತ್ಯಾಚಾರ ಪ್ರಕರಣಕ್ಕೂ ಹಾಗೂ ನನ್ನ ಕೇಸ್ ಗೂ ಹೋಲಿಕೆಯಿದೆ ಎಂದು ಟೀಂ ಇಂಡಿಯಾ ಕ್ರಿಕೆಟರ್ ಮೊಹಮದ್ ಶಮಿ ವಿರಕ್ತ ಪತ್ನಿ ಹಸೀನ್ ಜಹಾನ್ ...

ಕೊಲ್ಕೊತಾ: ಕಥುವಾ ಅತ್ಯಾಚಾರ ಪ್ರಕರಣಕ್ಕೂ ಹಾಗೂ ನನ್ನ ಕೇಸ್ ಗೂ ಹೋಲಿಕೆಯಿದೆ ಎಂದು ಟೀಂ ಇಂಡಿಯಾ ಕ್ರಿಕೆಟರ್ ಮೊಹಮದ್ ಶಮಿ ವಿರಕ್ತ ಪತ್ನಿ  ಹಸೀನ್ ಜಹಾನ್ ಹೇಳಿದ್ದಾರೆ.
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಪ್ರಕರಣ  ದೇಶಾದ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಶಮಿ ವಿರುದ್ಧ ಪತ್ನಿ ಹಸಿನ್ ಜಹಾನ್ ಅತ್ಯಾಚಾರ, ಕೊಲೆ ಯತ್ನ ಪ್ರಕರಣಗಳನ್ನು ದಾಖಲಿಸಿದ್ದು, ಕಥುವಾ ಅತ್ಯಾಚಾರ ಸಂತ್ರಸ್ತೆಗೆ ಹೋಲಿಸಿಕೊಂಡಿದ್ದಾರೆ.
ಜಮ್ಮು ಕಾಶ್ಮೀರದ ಕಥುವಾ ಪ್ರದೇಶದಲ್ಲಿ ಬರ್ಕ್ವಾಲ್ ಸಮುದಾಯದ ಅಪ್ರಾಪ್ತೆ ಮೇಲೆ ಸುಮಾರು 8 ದಿನಗಳ ಕಾಲ ನಿರಂತರ ಅತ್ಯಾಚಾರ ನಡೆಸಿ ನಂತರ ಆಕೆಯನ್ನು ಕೊಲೆ ಮಾಡಲಾಗಿತ್ತು.
ಕಥುವಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ವಿರೋಧಿಸಿ ಏಪ್ರಿಲ್ 23 ರಂದು ಕೊಲ್ಕೊತಾದಲ್ಲಿ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಹಸೀನಾ ಜಹಾನ್, ನನಗೂ ಕಥುವಾ ಪ್ರಕರಣಕ್ಕೂ ಯಾವುದೇ ವ್ಯತ್ಯಾಸವಿಲ್ಲ, ಎರಡು ಪ್ರಕರಣ ಒಂದೇ ರೀತಿಯಿದೆ, ನಾನಿನ್ನೂ ಬದುಕಿದ್ದೇವೆ ಅಷ್ಟೇ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶಮಿ ಮತ್ತು ಅವರ ಕುಟುಂಬಸ್ಥರು ಸೇರಿ  ನನ್ನನ್ನ ಮೇಲೆ ಅತ್ಯಾಚಾರ ನಡೆಸಿ, ಕೊಂದು ನನ್ನ ಶವವನ್ನು ಕಾಡಿನಲ್ಲಿ ಎಸೆಯಲು ಯೋಜನೆ ರೂಪಿಸಿದ್ದರು, ಇದೆಲ್ಲಾ ನಡೆದು 2 ತಿಂಗಳಾಗಿದ್ದು, ಅದರ ವಿರುದ್ಧ ನಾನಿನ್ನು ಹೋರಾಟ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಆದರೆ ಈ ಪ್ರಕರಣ ಸಂಬಂಧ ಮೊಹಮದ್ ಶಮಿಯಾಗಲಿ ಅಥವಾ ಅವರ ಕುಟುಂಬಸ್ಥರಾಗಲಿ ಯಾರೂ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT