ಇಶಾಂತ್ ಶರ್ಮಾ ಮಾರಕ ಬೌಲಿಂಗ್ ಗೆ ಇಂಗ್ಲೆಡ್ ತತ್ತರ 180 ಕ್ಕೆ ಸರ್ವಪತನ ಭಾರತಕ್ಕೆ 194 ರನ್ ಗುರಿ
ಲಂಡನ್: ಇಂಗ್ಲೆಂಡ್- ಭಾರತ ನಡುವಿನ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ನ 2 ನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ 180 ಕ್ಕೆ ಸರ್ವಪತನ ಕಂಡಿದ್ದು ಭಾರತಕ್ಕೆ 194 ರನ್ ಗಳ ಗುರಿ ನೀಡಿದೆ.
3 ನೇ ದಿನದ ಆಟದಲ್ಲಿ ಭಾರತ ಇಂಗ್ಲೆಂಡ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದು, ಇಶಾಂತ್ ಶರ್ಮಾ ಮಾರಕ ಬೌಲಿಂಗ್ ಗೆ ಇಂಗ್ಲೆಂಡ್ ಆಟಗಾರರು ತತ್ತರಿಸಿದರು. 13 ಓವರ್ ಗಳಲ್ಲಿ 51 ರನ್ ನೀಡಿದ ಇಶಾಂತ್ ಶರ್ಮಾ ಬರೊಬ್ಬರಿ 5 ವಿಕೆಟ್ ತೆಗೆದು ಯಶಸ್ವಿ ಬೌಲರ್ ಎನಿಸಿದರು. ಇನ್ನು ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದು 21 ಓವರ್ ಗಳಲ್ಲಿ 59 ರನ್ ಗಳನ್ನು ನೀಡಿದರೆ, 7 ಓವರ್ ಗಳಲ್ಲಿ 20 ರನ್ ನೀಡಿ 2 ವಿಕೆಟ್ ಗಳಿಸಿದರು.
ಸ್ಯಾಮ್ ಕ್ಯುರನ್( 65ಎಸೆತಗಳಲ್ಲಿ 63 ರನ್ ) 2 ನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದು, ಉಳಿದೆಲ್ಲಾ ಆಟಗಾರರು 30 ರನ್ ಗಳಿಗಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗದೇ ಪೆವಿಲಿಯನ್ ಪರೇಡ್ ನಡೆಸಿದರು. ಭಾರತ ಬ್ಯಾಟಿಂಗ್ ಆರಂಭಿಸಿದ್ದು ಇತ್ತೀಚಿನ ವರದಿ ಪ್ರಕಾರ ವಿಕೆಟ್ ನಷ್ಟವಿಲ್ಲದೇ 9 ರನ್ ಗಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics