ಕೊನೆಗೂ ಸಚಿನ್ ತೆಂಡೂಲ್ಕರ್ ಲಾರ್ಡ್ಸ್ ಗಂಟೆ ಬಾರಿಸಲೇ ಇಲ್ಲ, ಯಾಕೆ ಗೊತ್ತ!
ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿದೆ...
ಲಂಡನ್: ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿದೆ.
ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಇಲ್ಲಿ ದಿನದ ಪಂದ್ಯದ ಆರಂಭವನ್ನು ಗಂಟೆ ಬಾರಿಸುವ ಮೂಲಕ ಸಾರುವ ಸಂಪ್ರದಾಯವಿದೆ.
ಟೀಂ ಇಂಡಿಯಾ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಈ ಗೌರವ ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಗೆ ಲಭಿಸಿತ್ತು. ಆದರೆ ಮಳೆಯಿಂದಾಗಿ ಆಟ ಆರಂಭವಾಗದೇ ಇದ್ದುದ್ದರಿಂದ ಸದ್ಯ ಸಚಿನ್ ಗೆ ಈ ಅವಕಾಶ ತಪ್ಪಿದೆ.
ಟೆಸ್ಟ್ ಪಂದ್ಯದ ಐದೂ ದಿನಗಳ ಕಾಲ ಖ್ಯಾತ ಮಾಜಿ ಕ್ರಿಕೆಟಿಗರಿಗೆ ಈ ಅವಕಾಶ ಸಿಗುತ್ತದೆ. ಸದ್ಯ ಈ ಅವಕಾಶ ಸಿಕ್ಕದಿದ್ದರು ಐದನೇ ದಿನದಾಟದಂದು ಗಂಟೆ ಬಾರಿಸಲು ಯಾವ ಆಟಗಾರನು ಆಯ್ಕೆಯಾಗದೆ ಇರುವುದು ಸಚಿನ್ ಅವರಿಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.