ದ್ವಿತೀಯ ಟೆಸ್ಟ್: ಲಾರ್ಡ್ಸ್‌ನಲ್ಲಿ ಭಾರತಕ್ಕೆ ಮುಖಭಂಗ: ಇಂಗ್ಲೆಂಡ್ ಗೆ ಇನ್ನಿಂಗ್ಸ್, 159 ರನ್ ಜಯ 
ಕ್ರಿಕೆಟ್

ದ್ವಿತೀಯ ಟೆಸ್ಟ್: ಲಾರ್ಡ್ಸ್‌ನಲ್ಲಿ ಭಾರತಕ್ಕೆ ಮುಖಭಂಗ: ಇಂಗ್ಲೆಂಡ್ ಗೆ ಇನ್ನಿಂಗ್ಸ್, 159 ರನ್ ಜಯ

ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಬಾರತ-ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ನಲ್ಲಿ ಭಾರತ ಇನ್ನಿಂಗ್ಸ್ ಮತ್ತು 159 ರನ್ ಗಳ ಹೀನಾಯ ಸೋಲು ಅನುಭವಿಸಿದೆ.

ಲಂಡನ್:  ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ  ನಡೆದ ಬಾರತ-ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ನಲ್ಲಿ ಭಾರತ ಇನ್ನಿಂಗ್ಸ್ ಮತ್ತು 159 ರನ್ ಗಳ ಹೀನಾಯ ಸೋಲು ಅನುಭವಿಸಿದೆ. ಇದರೊಡನೆ ಅತಿಥೇಯ ಇಂಗ್ಲೆಂಡ್ ಐದು ಟೆಸ್ಟ್ ಗಳ ಸರಣಿಯಲ್ಲಿ 2-0 ಅಂತರ ಮುನ್ನಡೆ ಸಾಧಿಸಿದೆ.
ನಾಲ್ಕನೇ ದಿನದಾಟದ ಊಟದ ವಿರಾಮದ ವೇಳೆ ಭಾರತ ಎರಡು ವಿಕೆಟ್ ನಷ್ಟಕ್ಕೆ 17 ರನ್ ಕಲೆ ಹಾಕಿದ್ದ ಟೀಂ ಇಂಡಿಯಾ  ಕೇವಲ 130 ರನ್‌ಗಳಿಗೆ ಆಲೌಟಾಗುವ ಮೂಲಕ 159 ರನ್ ಅಂತರದ ಇನ್ನಿಂಗ್ಸ್ ಸೋಲಿಗೆ ತುತ್ತಾಗಿದೆ.
ಭಾರತ ಪರವಾಗಿ ಚೇತೇಶ್ವರ ಪೂಜಾರ್‌ 17, ಅಜಿಂಕ್ಯ ರಹಾನೆ 13, ವಿರಾಟ್‌ ಕೊಹ್ಲಿ 17 ರನ್‌, ಹಾರ್ದಿಕ್‌ ಪಾಂಡ್ಯ 26, ದಿನೇಶ್‌ ಕಾರ್ತಿಕ್‌, ಕುಲದೀಪ್‌ ಯಾದವ್‌ ಹಾಗೂ ಮೊಹಮ್ಮದ್‌ ಶಮಿ ಶೂನ್ಯ, ಆರ್‌ ಅಶ್ವಿನ್‌ 33*, ಇಶಾಂತ್‌ ಶರ್ಮಾ 2 ರನ್ ಗಳಿಸಿದ್ದರು.
ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್​ಸನ್ ಮತ್ತು ಸ್ಟುವರ್ಟ್ ಬ್ರಾಡ್ ತಲಾ ನಾಲ್ಕು ವಿಕೆಟ್‌ ಪಡೆದು ಮಿಂಚಿದ್ದರು. ಕ್ರಿಸ್‌ ವೋಕ್ಸ್‌ 2 ವಿಕೆಟ್ ಕಿತ್ತರು.
ಇನ್ನು ಭಾರತ ಇಂಗ್ಲೆಂಡ್ ನೆಲದಲ್ಲಿ ಸರಣಿ ಜಯ ಸಾಧಿಸಬೇಕಾದಲ್ಲಿ ಉಳಿದ ಮೂರೂ ಪಂದ್ಯಗಳನ್ನು ಗೆಲ್ಲ್ಲುವುದು ಅನಿವಾರ್ಯವಾಗಿದೆ,

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

SCROLL FOR NEXT