ಜೇಮ್ಸ್​ ಆ್ಯಂಡರ್​ಸನ್ 
ಕ್ರಿಕೆಟ್

ಲಾರ್ಡ್ಸ್‌ನಲ್ಲಿ 100 ವಿಕೆಟ್ ಪಡೆದು ಜೇಮ್ಸ್ ಆ್ಯಂಡರ್​ಸನ್ ದಾಖಲೆ

ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್​ನಲ್ಲಿ ಇಂಗ್ಲೆಂಡ್ ನ ಜೇಮ್ಸ್​ ಆ್ಯಂಡರ್​ಸನ್ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಐತಿಹಾಸಿಕ 100 ವಿಕೆಟ್‌ ಗಳ ಪಡೆದು ನೂತನ ದಾಖಲೆ ನಿರ್ಮಿಸಿದ್ದಾರೆ.

ಲಂಡನ್: ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್​ನಲ್ಲಿ ಇಂಗ್ಲೆಂಡ್ ನ ಜೇಮ್ಸ್​ ಆ್ಯಂಡರ್​ಸನ್  ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಐತಿಹಾಸಿಕ 100 ವಿಕೆಟ್‌ ಗಳ ಪಡೆದು ನೂತನ ದಾಖಲೆ ನಿರ್ಮಿಸಿದ್ದಾರೆ.
ಇಂಗ್ಲೆಂಡ್ ಬಲಗೈ ಅನುಭವಿ ವೇಗಿ ಆ್ಯಂಡರ್​ಸನ್ 2ನೇ ಟೆಸ್ಟ್​ನ 2ನೇ ಇನಿಂಗ್ಸ್ ನಲ್ಲಿ  2ನೇ ಓವರ್​ನ ಎರಡನೇ ಎಸೆತದಲ್ಲಿ ಮುರಳಿ ವಿಜಯ್ ವಿಕೆಟ್ ಪಡೆಯುವ ಮೂಲಕ ಈ ಸಾಧನೆಗೈದರು.
ಆ್ಯಂಡರ್​ಸನ್​  ಭಾರತ ವಿರುದ್ಧ ನಡೆಯುತ್ತಿರುವ ಟೆಸ್ಟ್ ನಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಸಹ ಉತ್ತಮ ಬೌಲಿಂಗ್ ನಡೆಸಿದ್ದಲ್ಲದೆ ಐದು ವಿಕೆಟ್ ಕಬಳಿಸಿ ಭಾರತ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದ್ದರು.ಇದೀಗ ಎರಡನೇ ಇನ್ನಿಂಗ್ಸ್ ನಲ್ಲಿಸ್ ಅಹ ಭರ್ಜರಿ ಪ್ರದರ್ಶನ ನೀಡಿ ಭಾರತೀಯ ಆಟಗಾರರ ಪಾಲಿಗೆ ಸವಾಲಾಗಿದ್ದಾರೆ.
ಇಷ್ಟೇ ಅಲ್ಲದೆ ಆ್ಯಂಡರ್​ಸನ್ ಮುರಳಿ ವಿಜಯ್ ಅವರನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಔಟ್ ಮಾಡಿರುವ ಆಟಗಾರರಾಗಿಯೂ ದಾಖಲೆ ನಿರ್ಮಿಇಸ್ದ್ದು ಇದುವರೆಗೆ ಅವರು ವಿಜಯ್ ಅವರನ್ನು ಏಳು ಬಾರಿ ಔಟ್ ಮಾಡಿದ್ದಾರೆ. ಹಾಗೇ 150ನೇ ಬಾರಿಗೆ ಓಪನರ್ ಬ್ಯಾಟ್ಸ್‌ಮನ್ ಔಟ್ ಮಾಡಿದ ಕೀರ್ತಿ ಸಹ ಇವರಿಗೆ ಸಂದಿದೆ. ಇಂತಹಾ ದಾಖಲೆ ಮಾಡಿದ ಎರಡನೇ ಆಟಗಾರ ಇವರಾಗಿದ್ದು ಆಸ್ಟ್ರೇಲಿಯಾದ ಗ್ಲೇನ್ ಮೆಕ್​ಗ್ರಾತ್ (155 ಬಾರಿ ) ಮೊದಲಿಗರೆನಿಸಿದ್ದಾರೆ.
ಇಂಗ್ಲೆಂಡಿನ ಅನುಭವಿ ಆಟಗಾರ ಆ್ಯಂಡರ್​ಸನ್ಒಂದೇ ಮೈದಾನದಲ್ಲಿ 100ಕ್ಕೂ ಹೆಚ್ಚು ವಿಕೆಟ್ ಕಬಳಿಸಿದ ಎರಡನೇ ಆಟಗಾರ ಎನಿಸಿದ್ದಾರೆ. ಇದಕ್ಕೆ ಮುನ್ನ ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್ ಮುರುಳ ಕೊಲಂಬೋ(166), ಕ್ಯಾಂಡಿ(117) ಹಾಗೂ ಗಾಲೆಯಲ್ಲಿ (111)ವಿಕೆಟ್​ ಪಡೆದು ದಾಖಲೆ ನಿರ್ಮಿಸಿದ್ದರು.
ಆ್ಯಂಡರ್​ಸನ್​  ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಇದುವರೆಗೆ 550 ಗಳಿಸಿಕೊಂಡಿದ್ದಾರೆ.
ಸಂಕಷ್ಟದಲ್ಲಿ ಭಾರತ 
ದ್ವಿತೀಯ ಟೆಸ್ಟ್ ನ ನಾಲ್ಕನೇ ದಿನದ ಊಟದ ವಿರಾಮಕ್ಕೆ ಮುನ್ನ ಭಾರತ ಎರಡು ವಿಕೆಟ್ ನಷ್ಟಕ್ಕೆ 17 ರನ್ ಕಲೆ ಹಾಕಿತ್ತು.
ಭಾರತದ ಪರ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಕ್ರಮವಾಗಿ ಐದು ಮತ್ತು ಒಂದು ರನ್ ಪಡೆದು ನಿರ್ಗಮಿಸಿದ್ದರು.ಇದರ ನಡುವೆ ಭಾರತ ಬ್ಯಾಟಿಂಗ್ ಗೆ ವರುಣನ ಅಡ್ಡಿಯೂ ಉಂಟಾಗಿತ್ತು.
ಇದಕ್ಕೆ ಮುನ್ನ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ಅನ್ನು ಏಳು ವಿಕೆಟ್ ನಷ್ಟಕ್ಕೆ 396 ರನ್ ಗಳೊಡನೆ ಡಿಕ್ಲೇರ್ ಮಾಡಿಕೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT