ನಾಟಿಂಗ್ ಹ್ಯಾಮ್: ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿಇರುವ ಇಂಗ್ಲೆಂಡ್- ಭಾರತ ವಿರುದ್ಧದ ಮೂರನೇ ಟೆಸ್ಟ್ ನ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 307 ರನ್ ಗಳಿಸಿದೆ.
ನಾಯಕ ವಿರಾಟ್ ಕೊಹ್ಲಿ (97) ರನ್ ಗಳಿಸಿ ಶತಕ ವಂಚಿತರಾದರೂ ಅದ್ಭುತ ಆಟ ಪ್ರದರ್ಶಿಸಿದರು. ಕೊಹ್ಲಿಗೆ ಅಜಿಂಕ್ಯ ರೆಹಾನೆ ಉತ್ತಮ ಸಾಥ್ ನೀಡಿ 81 ರನ್ ಗಳಿಸಿದರು.
152 ಎಸೆತಗಳಲ್ಲಿ 11 ಬೌಂಡರಿ ನೆರವಿನೊಂದಿಗೆ 97 ರನ್ ಗಳಿಸಿದರು, ಅಜಿಂಕ್ಯಾ ರಹಾನೆ 131 ಎಸೆತಗಳಲ್ಲಿ 12 ಬೌಂಡರಿಗಳೊಮ್ದಿಗೆ 81 ರನ್ ಗಳಿಸಿದರು. ಕೊಹ್ಲಿ ನಂತರ ಕ್ರೀಸ್ ಗೆ ಇಳಿದ ಹಾರ್ದಿಕ್ ಪಾಂಡ್ಯ 18 ರನ್ ಗಳಿಸಿ ಔಟ್ ಆದರು, ಸದ್ಯ ಕ್ರೀಸ್ ನಲ್ಲಿರುವ ರಿಷಬ್ ಪಂತ್ 32 ಎಸೆತಗಳಲ್ಲಿ 22 ರನ್ ಗಳಿಸಿದ್ದಾರೆ.