ಪ್ರಾಣಿ ಪ್ರಿಯ ಎಂಎಸ್ ಧೋನಿ ತಮ್ಮ ನೆಚ್ಚಿನ ಶ್ವಾನಗಳಿಗೆ ಬಾಲ್ ಕ್ಯಾಚ್ ಹಿಡಿಯುವ ಟ್ರೈನಿಂಗ್, ವಿಡಿಯೋ ವೈರಲ್!
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಶ್ವಾನಗಳೆಂದರೆ ಮೊದಲಿನಿಂದಲೂ ಬಹಳ ಪ್ರೀತಿ. ಸದ್ಯ ಕ್ರಿಕೆಟ್ ನಿಂದ ವಿರಾಮ ಪಡೆದಿರುವ ಧೋನಿ...
ರಾಂಚಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಶ್ವಾನಗಳೆಂದರೆ ಮೊದಲಿನಿಂದಲೂ ಬಹಳ ಪ್ರೀತಿ. ಸದ್ಯ ಕ್ರಿಕೆಟ್ ನಿಂದ ವಿರಾಮ ಪಡೆದಿರುವ ಧೋನಿ ಬಿಡುವಿನ ವೇಳೆ ಶ್ವಾನಗಳೊಂದಿಗೆ ಕಾಲ ಕಳೆಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಎಂಎಸ್ ಧೋನಿ ತಮ್ಮ ಫಾರ್ಮ್ ಹೌಸ್ ನಲ್ಲಿ ನೆಚ್ಚಿನ ಶ್ವಾನಗಳ ಜತೆ ಕಾಲ ಕಳೆಯುತ್ತಿದ್ದಾರೆ. ಡಚ್ ಶೆಫರ್ಡ್ ನಾಯಿಗಳಿಗೆ ಧೋನಿ ಬಾಲ್ ಕ್ಯಾಚ್ ಹಿಡಿಯುವ ತರಬೇತಿ ನೀಡುತ್ತಿದ್ದು ಈ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾಲ್ಕೈದು ಶ್ವಾನಗಳಿಗೆ ಧೋನಿ ಕಲ್ಲಿನ ಮೇಲೆ ಕುಳಿತುಕೊಂಡು ಬಾಲ್ ಕ್ಯಾಚ್ ಹಿಡಿಯುವ ತರಬೇತಿ ನೀಡಿದರು. ಈ ಹಿಂದೆ ಝೋಯಾ ಎಂಬ ಹೆಸರಿನ ನಾಯಿಗೆ ರಿಂಗ್ ಮೂಲಕ ಹಾರಿ ಬರುವುದನ್ನು ಧೋನಿ ತರಬೇತಿ ನೀಡುತ್ತಿದ್ದ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.