ಸಂಗ್ರಹ ಚಿತ್ರ 
ಕ್ರಿಕೆಟ್

'ನಾನೇಕೆ ಸ್ಲೀವ್ ಲೆಸ್ ಜಾಕೆಟ್, 5 ಇಂಚಿನ ಚಪ್ಪಲಿ ಧರಿಸಬಾರದು': ಟೀಕಾಕಾರರಿಗೆ ಮಯಾಂತಿ ಲ್ಯಾಂಗರ್ ತಿರುಗೇಟು

ಖ್ಯಾತ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ತಮ್ಮ ಉಡುಗೆ-ತೊಡುಗೆಯನ್ನು ಟೀಕಿಸಿದ್ದವರಿಗೆ ತಕ್ಕ ತಿರುಗೇಟು ನೀಡಿದ್ದಾರೆ.

ನವದೆಹಲಿ: ಖ್ಯಾತ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ತಮ್ಮ ಉಡುಗೆ-ತೊಡುಗೆಯನ್ನು ಟೀಕಿಸಿದ್ದವರಿಗೆ ತಕ್ಕ ತಿರುಗೇಟು ನೀಡಿದ್ದಾರೆ.
ಖಾಸಗಿ ಆಂಗ್ಲ ವೆಬ್ ಸೈಟ್ ವೊಂದರ ವಿಶೇಷ ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾಯಂತಿ ಲ್ಯಾಂಗರ್,  ಕ್ರೀಡಾ ಲೋಕದಲ್ಲಿನ ತಮ್ಮ ಸಕ್ಸಸ್ ಫುಲ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಅಂತೆಯೇ ಗ್ಲಾಮರಸ್ ಲೋಕದ ಕೆಲ ವಿವಾದಗಳನ್ನು ಹೊರಹಾಕಿದ್ದಾರೆ. 
ಸಂದರ್ಶನದಲ್ಲಿ ತಮ್ಮ ವೃತ್ತಿ ಜೀವನ ಖಾಸಗಿ ಜೀವನದ ಬಗ್ಗೆ ಮಾತನಾಡಿರುವ ಮಯಾಂತಿ, 'ಈ ಹಿಂದೆ ಟೀಮ್ ಇಂಡಿಯಾ ಆಟಗಾರ ಸುರೇಶ್ ರೈನಾರನ್ನು ಸಂದರ್ಶನ ಮಾಡುವಾಗ, ಯಾರೋ ನನ್ನ ಸ್ಕ್ರೀನ್ ಶಾಟ್ ತೆಗೆದು, ಪತಿ ಸ್ಟುವರ್ಟ್​ ಬಿನ್ನಿಗೆ ಕಳುಹಿಸಿದ್ದರು. ಅಲ್ಲದೆ ನಾನು ಧರಿಸಿದ್ದ ಉಡುಪಿನ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದರು.  ಅಷ್ಟೇ ಅಲ್ಲ.. ನಾನು ಹಾಕೋ ಹೈ ಹೀಲ್ಸ್ ಚಪ್ಪಲಿ ಬಗ್ಗೆಯೂ, ಸಾಕಷ್ಟು ಟೀಕೆ ಮಾಡಿದ್ದರು. ಆದರೆ ಇದಕ್ಕೆಲ್ಲ ನಾನಾಗಲಿ ಅಥವಾ ನನ್ನ ಪತಿಯಾಗಲಿ ಸೊಪ್ಪು ಹಾಕಿಲ್ಲ. ಇಂತಹ ಟೀಕೆ ಟಿಪ್ಪಣಿಗಳು ಸಾಮಾನ್ಯ. ನನ್ನ ಉಡುಪು ನನ್ನ ಹಕ್ಕು. ಇದರಲ್ಲಿ ಬೇರೊಬ್ಬರ ಮಧ್ಯ ಪ್ರವೇಶ ಅಥವಾ ನಿರ್ದೇಶನವನ್ನು ನಾನು ಒಪ್ಪುವುದಿಲ್ಲ. ನಾನು ಐದೋ, ಆರೋ ಇಂಚು ಹೀಲ್ಸ್​​ ಹಾಕ್ತೀನಿ, ಅದ್ರಿಂದ ನಿಮಗೇನು? ಎಂದು ಹೇಳಿದ್ದಾರೆ.
ಈ ಹಿಂದೆ ಅಂದರೆ ಕಳೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳೆ ಇದೇ ಮಯಾಂತಿ ಲುಂಗಿ ಡ್ರೆಸ್ ಧರಿಸಿ ಸಿಕ್ಕಾಪಟ್ಟೆ ಸುದ್ದಿಗೆ ಗ್ರಾಸವಾಗಿದ್ದರು, ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT