ನ್ಯೂಜಿಲ್ಯಾಂಡ್: ನ್ಯೂಜಿಲ್ಯಾಂಡ್ ತಂಡದ ಮಾಜಿ ಕ್ರಿಕೆಟಿಗ ನಾಥನ್ ಮೆಕಲಮ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಾವಿನ ಸುದ್ದಿಗೆ ಪ್ರತಿಕ್ರಿಯಿಸಿರುವ ನಾಥನ್ ಮೆಕಲಮ್ ತಾವು ಜೀವಂತವಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ. ತಮ್ಮ ಸಹೋದರ ಬ್ರೆಂಡನ್ ಮೆಕಲಮ್ ಅವರು ತಾವು ಸೆಲ್ಫಿ ಫೋಟೋವನ್ನು ಟ್ವೀಟ್ ಮಾಡುತ್ತಾ ಸಾವಿನ ಸುಳ್ಳು ವದಂತಿಗೆ ಅಂತ್ಯವಾಡಿದ್ದಾರೆ.
ಮೆಕಲಮ್ ಟ್ವೀಟ್ ನಲ್ಲಿ ನಾನು ಜೀವಂತವಾಗಿದ್ದೇನೆ ಮತ್ತು ಹಿಂದಿಗಿಂತಲೂ ಹೆಚ್ಚು ಬಲಿಷ್ಠನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನ್ಯೂಜಿಲ್ಯಾಂಡ ್ಪರ 2007 ರಿಂದ 2016ರ ವರೆಗೆ ತಂಡವನ್ನು ಪ್ರತಿನಿಧಿಸಿದ್ದ ಮೆಕಲಂ 84 ಏಕದಿನ ಹಾಗೂ 63 ಟಿ20 ಪಂದ್ಯಗಳನ್ನು ಆಡಿದ್ದಾರೆ.