ಕ್ರಿಕೆಟ್

ಆಸೀಸ್-ಭಾರತ ಟೆಸ್ಟ್: ಅಗ್ರ ಕ್ರಮಾಂಕದ ಆಟಗಾರರ ಬ್ಯಾಟಿಂಗ್ ಬಗ್ಗೆ ಚೇತೇಶ್ವರ ಪೂಜಾರ ಹೇಳಿದ್ದು ಹೀಗೆ

Srinivas Rao BV
ಅಡೆಲೇಡ್: ಆಸ್ಟ್ರೇಲಿಯಾ- ಭಾರತ ನಡುವಿನ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಪಾಲಿಗೆ ಚೆತೇಶ್ವರ್ ಪೂಜಾರಾ ಹಿರೋ ಆಗಿದ್ದು, ಅಗ್ರ ಕ್ರಮಾಂಕದ ಆಟಗಾರರು ಅದ್ಭುತವಾಗಿ ಆಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. 
127 ರನ್ ಗಳಿಸಿ 6 ವಿಕೆಟ್ ನಷ್ಟ ಎದುರಿಸಿದ್ದ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಚೇತೇಶ್ವರ್ ಪೂಜಾರ  ಅವರ ಆಕರ್ಷಕ ಶತಕದಿಂದ ಚೇತರಿಸಿಕೊಂಡ ಭಾರತ 250-9 ರನ್ ಗಳಿಸಿದೆ. 
ನಮ್ಮ ಅಗ್ರಕ್ರಮಾಂಕದ ಬ್ಯಾಟ್ಸ್ಮನ್ ಉತ್ತಮವಾಗಿ ಆಡಬಹುದಿತ್ತು ಆದರೆ ಆಸ್ಟ್ರೇಲಿಯಾ ಬೌಲರ್ ಗಳೂ ಉತ್ತಮವಾಗಿ ಬೌಲಿಂಗ್ ಮಾಡಿದರು, ನಾನು ತಾಳ್ಮೆಯಿಂದ ಆಡಬೇಕು ಕಳಪೆ ಎಸೆತಗಳಿಗಾಗಿ ಕಾಯುತ್ತಿದ್ದೆ. ಅವರ ಬೌಲಿಂಗ್ ಗೆ ಸೂಕ್ತವಾಗಿ ನಮ್ಮ ಬ್ಯಾಟ್ಸ್ಮನ್ ಗಳೂ ಆಡಬೇಕಿತ್ತು. ಆದರೆ ನಮ್ಮ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಗಳು ತಪ್ಪಿನಿಂದ ಪಾಠ ಕಲಿಯಲಿದ್ದಾರೆ ಎಂದು ಪೂಜಾರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
SCROLL FOR NEXT