ನವದೆಹಲಿ: 2011ರ ವಿಶ್ವಕಪ್ ವಿಜೇತ ಟೀಂ ಇಂಡಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗೌತಮ್ ಗಂಭೀರ್ ಅವರು ಸದ್ಯ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದು ಇದೀಗ ಎಂಎಸ್ ಧೋನಿ ಬಗ್ಗೆ ಗಂಭೀರ್ ಕೆಲ ಮಾತುಗಳನ್ನಾಡಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಜತೆ ನನಗೆ ಭಿನ್ನಾಭಿಪ್ರಾಯ ಇರಬಹುದೇ ಹೊರತು ವೈರತ್ವವಿಲ್ಲ ಎಂದು ಹೇಳಿದ್ದಾರೆ. ತಮ್ಮ ನಿವೃತ್ತಿ ಘೋಷಣೆಯ ಬಳಿಕ ಇದೇ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಗಂಭೀರ್ ಧೋನಿ ಕುರಿತ ತಮ್ಮ ಮನಸ್ತಾಪದ ಕುರಿತು ಹೇಳಿದ್ದಾರೆ.
2015ರ ವಿಶ್ವಕಪ್ ನಲ್ಲಿ ಆಡಲು ಅವಕಾಶ ಸಿಗದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಗಂಭೀರ್, ನನ್ನೊಂದಿಗೆ ಆಡಿದ ಎಲ್ಲಾ ಆಟಗಾರರಿಗೂ 2ರಿಂದು ಮೂರು ವಿಶ್ವಕಪ್ ಆಡಿದ್ದಾರೆ. ಆದರೆ ನಾನು ಮಾತ್ರ. ಆ ಅವಕಾಶ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ನಾನು ಆಡಿದ ವಿಶ್ವಕಪ್ ಟೂರ್ನಿಯಲ್ಲಿ ನೀಡಿದ ಪ್ರದರ್ಶನದ ಬಗ್ಗೆ ನನಗೆ ತೃಪ್ತಿ ಇದೆ ಎಂದರು.
2015ರ ವಿಶ್ವಕಪ್ ನಲ್ಲಿ ಗಂಭೀರ್ ಅವಕಾಶ ವಂಚಿತರಾಗಲು ತಂಡದ ನಾಯಕತ್ವ ವಹಿಸಿದ್ದ ಧೋನಿ ಕಾರಣ ಎಂಬ ಆರೋಪ ಮಾಡಲಾಗಿತ್ತು. ಇದು ಗಂಭೀರ್ ಗೆ ಧೋನಿ ಮೇಲೆ ಅಸಹನೆ ವ್ಯಕ್ತವಾಗಲು ಕಾರಣವಾಗಿತ್ತು.
ಉಳಿದಂತೆ ದೆಹಲಿ ಹಾಗೂ ಆಂಧ್ರಪ್ರದೇಶ ನಡುವಿನ ರಣಜಿ ಪಂದ್ಯ ಗಂಭೀರ್ ಅವರ ವೃತ್ತಿ ಜೀವನದ ಅಂತಿಮ ಪಂದ್ಯವಾಗಲಿದೆ. ನಂತರ ಗಂಭೀರ್ ರಾಜಕೀಯ ಪ್ರವೇಶ ಮಾಡುತ್ತಾರೆ ಎನ್ನಲಾಗಿದೆ.