ಕ್ರಿಕೆಟ್

ಅಡಿಲೇಡ್ ಪಿಚ್ ನಲ್ಲಿ ಹೇಗೆ ಆಡಬೇಕು ಎಂಬುದನ್ನು ಪೂಜಾರ ತೋರಿಸಿಕೊಟ್ಟಿದ್ದಾರೆ: ಟ್ರಾವಿಸ್ ಹೆಡ್

Srinivasamurthy VN
ಅಡಿಲೇಡ್: ಅಡಿಲೇಡ್ ಪಿಚ್ ನಲ್ಲಿ ಹೇಗೆ ಆಡಬೇಕು ಎಂಬುದನ್ನು ಪೂಜಾರ ತೋರಿಸಿಕೊಟ್ಟಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ದಾಂಡಿಗ ಟ್ರಾವಿಸ್ ಹೆಡ್ ಹೇಳಿದ್ದಾರೆ.
ಭಾರತದ ವಿರುದ್ಧ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪೂಜಾರಾ ಆಕರ್ಷಕ ಶತಕಿ ಸಿಡಿಸಿ ಭಾರತದ ಬ್ಯಾಟಿಂಗ್ ಗೆ ಜೀವ ತುಂಬಿದ್ದರು.  ಭಾರತದ ಅಗ್ರ ಗಣ್ಯ ಬ್ಯಾಟ್ಸಮನ್ ಗಳೇ ಓವಲ್ ಪಿಚ್ ನಲ್ಲಿ ಮುಗ್ಗರಿಸುತ್ತಿದ್ದರೆ ಪೂಜಾರ ಮಾತ್ರ ಮತ್ತೊಂದು ಬದಿಯಲ್ಲಿ ನಿರಾಯಾಸವಾಗಿ ಬ್ಯಾಟ್ ಬೀಸಿ ರನ್ ಕಲೆಹಾಕುತ್ತಿದ್ದರು. ಅವರ ಬ್ಯಾಟಿಂಗ್ ನೆರವಿನಿಂದಾಗಿಯೇ ಭಾರತ ಆಸಿಸ್ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಗೌರವಾನ್ವಿತ ಮೊತ್ತ ಪೇರಿಸಿತು.
ಪೂಜಾರಾ ಅವರ ಈ ಸ್ಪೆಷಲ್ ಇನ್ನಿಂಗ್ಸ್ ಕೇವಲ ಭಾರತೀಯರು ಮಾತ್ರವಲ್ಲದೇ ಆಸಿಸ್ ಬ್ಯಾಟ್ಸಮನ್ ಗಳಿಂದಲೂ ಶ್ಲಾಘನೆಗೆ ಪಾತ್ರವಾಗಿದೆ. ಸ್ವತಃ ಅಡಿಲೇಡ್ ನಲ್ಲೇ ಜನಿಸದ ಆಸಿಸ್ ಬ್ಯಾಟ್ಸಮನ್ ಪೂಜಾರ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದು, ಪೂಜಾರ ಓವಲ್ ಪಿಚ್ ನಲ್ಲಿ ಹೇಗೆ ಆಡಬೇಕು ಎಂಬುದರ ಬ್ಲೂ ಪ್ರಿಂಟ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇನ್ನಿಂಗ್ಸ್ ಮುಕ್ತಾಯದ ಮಾತನಾಡಿದ ಅವರು, 'ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್​ ಪೂಜಾರ ನೋಡಿ ಎಲ್ಲರೂ ಕಲಿಯಬೇಕಿದೆ. ಈ ಪಿಚ್​ ಹೇಗಿದೆ ಎಂಬುದನ್ನ ಕಂಡುಕೊಂಡ ಪೂಜಾರ ಮೊದಲ ಇನ್ನಿಂಗ್ಸ್​​ನಲ್ಲಿ ಶತಕ ಬಾರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅವರು ನಿಜಕ್ಕೂ ಅದ್ಬುತವಾಗಿ ಬ್ಯಾಟಿಂಗ್ ಮಾಡಿದರು. ಅಡಿಲೇಡ್​ನಲ್ಲಿ ಹೇಗೆ ಆಡಬೇಕು ಎಂಬುದಕ್ಕೆ ಬ್ಲೂ ಪ್ರಿಂಟ್​ ಹಾಕಿಕೊಟ್ಟಿದ್ದು, ಪೂಜಾರ ಎಂದರು ಎಂದು ಟ್ರಾವಿಸ್ ಹೆಡ್ ಹೇಳಿದ್ದಾರೆ.
ಇನ್ನು ಆಸ್ಟ್ರೇಲಿಯಾ ಪರ 167 ಬಾಲ್​ ಎದುರಿಸಿ 72 ರನ್​ ಮಾಡಿದ ಟ್ರಾವಿಸ್ ಹೆಡ್​ ಪೈನೆ ಪಡೆಯನ್ನ ಮುಜುಗರದಿಂದ ಪಾರು ಮಾಡಿದ್ದರು. ಮೊದಲ ಇನ್ನಿಂಗ್ಸ್​ನಲ್ಲಿ ಪೂಜಾರ 123 ರನ್​ ಮಾಡಿ, ಎರಡನೇ ಇನ್ನಿಂಗ್ಸ್ ನಲ್ಲೂ 71 ರನ್ ಗಳಿದ್ದರು.
SCROLL FOR NEXT