ನೆಟ್ ಪ್ರಾಕ್ಟೀಸ್ ಬಿಡಿ, ನಮ್ಮ ಹುಡುಗರಿಗೆ ವಿಶ್ರಾಂತಿ ಬೇಕು: ಕೋಚ್ ರವಿ ಶಾಸ್ತ್ರಿ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವ ಭಾರತ ತಂಡದ ಬಗ್ಗೆ ಕೋಚ್ ರವಿಶಾಸ್ತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಆಟಗಾರರಿಗೆ ಸಧ್ಯಕ್ಕೆ ವಿಶ್ರಾಂತಿ ಬೇಕೆಂದು
ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವ ಭಾರತ ತಂಡದ ಬಗ್ಗೆ ಕೋಚ್ ರವಿಶಾಸ್ತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಆಟಗಾರರಿಗೆ ಸಧ್ಯಕ್ಕೆ ವಿಶ್ರಾಂತಿ ಬೇಕೆಂದು ಹೇಳಿದ್ದಾರೆ.
"ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ತ್ ನಲ್ಲಿ 31 ರನ್ ಗಳಿಂದ ಸೋತಿದ್ದೆವು, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ನಲ್ಲಿ 6೦-70 ರನ್ ಗಳಿಂದ ಸೋತಿದ್ದೆವು. ಆದರೆ ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವುದು ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಪ್ರಾರಂಭ ಉತ್ತಮವಾಗಿದ್ದರೆ ಆತ್ಮವಿಶ್ವಾಸವೂ ಹೆಚ್ಚುತ್ತದೆ.
ಡಿ.14 ರಂದು 2 ನೇ ಟೆಸ್ಟ್ ಪ್ರಾರಂಭವಾಗಲಿದ್ದು ತಂಡ ಪರ್ತ್ ಗೆ ತೆರಳಲಿದೆ. ಇದಕ್ಕೂ ಮುನ್ನ ತಂಡದ ಆಟಗಾರರಿಗೆ ನೆಟ್ ಪ್ರಾಕ್ಟೀಸ್ ಗಿಂತಲೂ ವಿಶ್ರಾಂತಿ ಬೇಕೆಂದು ರವಿ ಶಾಸ್ತ್ರಿ ಹೇಳಿದ್ದಾರೆ.
ನೆಟ್ಸ್ ನ್ನು ಬಿಡಿ, ಅಲ್ಲಿಗೆ ಬಂದು ಕೇವಲ ಹಾಜರಿ ಹಾಕಿ ವಾಪಸ್ ಹೋಟೆಲ್ ಗೆ ಹೊರಡಿ, ಪರ್ತ್ ಪಿಚ್ ವೇಗಿಗಳಿಗೆ ಉತ್ತಮವಾಗಿದೆ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.