ಪರ್ತ್ ಟೆಸ್ಟ್: ಭಾರತಕ್ಕೆ ಕೊಹ್ಲಿ, ರಹಾನೆ ಆಸರೆ, ದಿನದಂತ್ಯಕ್ಕೆ ಭಾರತ 172/3 
ಕ್ರಿಕೆಟ್

2ನೇ ಟೆಸ್ಟ್: ಆಸ್ಟ್ರೇಲಿಯಾ 326, 2ನೇ ದಿನದಂತ್ಯಕ್ಕೆ ಭಾರತ 172/3; ಭಾರತಕ್ಕೆ ಕೊಹ್ಲಿ, ರಹಾನೆ ಆಸರೆ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಭಾರತ- ಆಸ್ಟ್ರೇಲಿಯ ನಡುವಿನ ಎರಡನೇ ಟೆಸ್ಟ್ ಎರಡನೇ ದಿನದಾಟ ಅಂತ್ಯವಾಗಿದ್ದು ಅತಿಥೇಯ ಅಸೀಸ್ ಪಡೆ 326 ರನ್ ಗಳಿಗೆ ಸರ್ವಪತನವಾಗಿದೆ. ಇದಕ್ಕೆ ಉತ್ತರವಾಗಿ ....

ಪರ್ತ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಭಾರತ- ಆಸ್ಟ್ರೇಲಿಯ ನಡುವಿನ ಎರಡನೇ ಟೆಸ್ಟ್ ಎರಡನೇ ದಿನದಾಟ ಅಂತ್ಯವಾಗಿದ್ದು ಅತಿಥೇಯ ಅಸೀಸ್ ಪಡೆ 326 ರನ್ ಗಳಿಗೆ ಸರ್ವಪತನವಾಗಿದೆ. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಗೆ ಇಳಿದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (82*) ಹಾಗೂ ಉಪನಾಯಕ ಅಜಿಂಕ್ಯ ರಹಾನೆ (51*) ಜತೆಯಾಟದ ನೆರವಿನೊಡನೆ ದಿನದಂತ್ಯಕ್ಕೆ 69 ಓವರ್ ಗಳಿಗೆ 172/3 ರನ್ ಪೇರಿಸಿದೆ.
ಭಾರತ ಇನ್ನಿಂಗ್ಸ್ ಮುನ್ನಡೆಗಾಗಿ ಇನ್ನೂ ಏಳು ವಿಕೆಟ್ ಗಳಿರುವಾಗ 154 ರನ್ ಗಳಿಸಬೇಕಿದೆ.
ಅಸೀಸ್ ಪಡೆಯ ಸವಾಲಿಗೆ ಬ್ಯಾಟ್ ಮೂಲಕ ಉತ್ತರಿಸಲು ಮುಂದಾದ ಟೀಂ ಇಂಡಿಯಾ 8 ರನ್ ಗಳಿಸುವಷ್ಟರಲ್ಲೇ ಎರಡು ಮಹತ್ವದ ವಿಕೆಟ್ ಕಳೆದುಕೊಂಡಿತ್ತು. ಮುರಳಿ ವಿಜಯ್ ಶೂನ್ಯ ಸಂಪಾದಿಸಿದರೆ ಕೆಎಲ್ ರಾಹುಲ್ ಕೇವಲ 2 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರೆ. 
ಇವರ ಬಳಿಕ ಜತೆಯಾದ ನಾಯಕ ಕೊಹ್ಲಿ ಹಾಗೂ ಪೂಜಾರ ಕುಸಿತದ ಭೀತಿಯಲ್ಲಿದ್ದ ಟೀಂ ಇಂಡಿಯಾಗೆ ಆಸರೆಯಾದರು. ಎಚ್ಚರಿಕೆಯ ಆಟವಾಡಿದ ಈ ಜೋಡಿ ಮೂರನೇ ವಿಕೆಟ್ ಗೆ 74 ರನ್ ಕಲೆಹಾಕಿತ್ತು. ಈ ವೇಳೆ 103 ಎಸೆತಗಳಲ್ಲಿ 24 ರನ್ ಗಳಿಸಿ ಔತಾಗಿದ್ದರು.
ಈ ಬಳಿಕ ಕೊಹ್ಲಿಗೆ ಜತೆಯಾದ ಅಜಿಂಕ್ಯ ರಹಾನೆ ಉಪನಾಯಕನ ಜವಾಬ್ದಾರಿ ಹೊತ್ತು ಯಶಸ್ವಿ ಪ್ರದರ್ಶನ ನೀಡಿದ್ದಾರೆ. 17ನೇ ಅರ್ಧಶತಕ ಸಿಡಿಸಿದ ರಹಾನೆ 103 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದ್ದರು. ಇನ್ನೊಂದೆಡೆ ಶತಕದತ್ತ ಮುನ್ನುಗ್ಗುತ್ತಿರುವ ನಾಯಕ ಕೊಹ್ಲಿ 181 ಎಸೆತಗಳಲ್ಲಿ ಒಂಬತ್ತು ಬೌಂಡರಿಗಳ ನೆರವಿನಿಂದ 82 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ