ಕ್ರಿಕೆಟ್

ಕೋಹ್ಲಿ ಆಕ್ರಮಣಶೀಲ ವರ್ತನೆ ಸಮರ್ಥಿಸಿಕೊಂಡ ಆಸ್ಟ್ರೇಲಿಯಾ ಮಾಜಿ ನಾಯಕ ಹೇಳಿದ್ದೇನು?

Srinivas Rao BV
ಆನ್ ಫೀಲ್ಡ್ ನಲ್ಲಿ ಆಕ್ರಮಣಶೀಲತೆ ತೋರುವ ವಿರಾಟ್ ಕೊಹ್ಲಿ ವಿರುದ್ಧ ಅನೇಕ ಬಾರಿ ಟೀಕೆಗಳು ವ್ಯಕ್ತವಾಗುತ್ತಿರುತ್ತವೆ. ಆದರೆ ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ಕೋಹ್ಲಿ ಆಕ್ರಮಣಶೀಲ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. 
ಕ್ರಿಕೆಟ್ ಜಗತ್ತಿಗೆ ಕೋಹ್ಲಿಯಂತಹ ವ್ಯಕ್ತಿತ್ವದ ಅಗತ್ಯವಿದೆ, ಅವರ ಆಕ್ರಮಣಶೀಲ ಮನೋಭಾವನೆ ಆನ್ ಫೀಲ್ಡ್ ನಲ್ಲಿ ಅಗತ್ಯವಿದೆ. ಈಗ ನಮ್ಮ ಕ್ರೀಡೆಯಲ್ಲಿ ಈ ರೀತಿಯ ಮನೋಭಾವನೆಯುಳ್ಳವರಿಲ್ಲ, ಆದರೆ ಕೊಹ್ಲಿಯಂತಹ ಆಕ್ರಮಣಶೀಲ ವರ್ತನೆ ಹೊಂದಿರುವ ಆಟಗಾರರು ಅಗತ್ಯ ಎಂದು ಬಾರ್ಡರ್ ಸಮರ್ಥಿಸಿಕೊಂದಿದ್ದಾರೆ. 
ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಆನ್ ಫೀಲ್ಡ್ ನಲ್ಲಿ ಆಕ್ರಮಣಶೀಲ ಮನೋಭಾವನೆ ಪ್ರದರ್ಶಿಸಿದ್ದಕ್ಕಾಗಿ ಸಂಜಯ್ ಮಂಜ್ರೇಕರ್, ಮೈಕ್ ಹಸ್ಸಿ, ಮಿಚೆಲ್ ಜಾನ್ಸನ್ ಅವರಿಂದ ಟೀಕೆಗೊಳಗಾಗಿದ್ದರು.  2 ನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಜೊತೆಗೂ ವಿರಾಟ್ ಕೊಹ್ಲಿ ವಾಗ್ವಾದಕ್ಕಿಳಿದಿದ್ದರು.
SCROLL FOR NEXT