ಮುಂಬೈ: ಈ ಆಟಗಾರ ಇಂದು ಕ್ರಿಕೆಟ್ ಆಡಿರುತ್ತಿದ್ದರೆ ಖಂಡಿತಾ 25 ಕೋಟಿ ರೂಗಳಿಗೆ ಹರಾಜಾಗಿರುತ್ತಿದ್ದರು ಎಂದು ಸುನಿಲ್ ಗಾವಸ್ಕರ್ ಹೇಳಿದ್ದಾರೆ.
ಬಹು ನಿರೀಕ್ಷಿತ ಐಪಿಎಲ್ 2019 ಸರಣಿಗೆ ಕ್ಷಣಗಣನೆ ಆರಂಭವಾಗಿದ್ದು, ಇತ್ತೀಚೆಗಷ್ಟೇ ಐಪಿಎಲ್ ಹರಾಜು ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಈ ಹೊತ್ತಿನಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಭಾರತೀಯ ಕ್ರಿಕೆಟ್ ನ ದಂತಕಥೆ ಸುನಿಲ್ ಗವಾಸ್ಕರ್ ಅವರು ತಮ್ಮ ಮತ್ತೋರ್ವ ಸಹ ಆಟಗಾರನನ್ನು ಹಾಡಿ ಹೊಗಳಿದ್ದಾರೆ.
ಕಪಿಲ್ದೇವ್ ವಿಶ್ವಕ್ರಿಕೆಟ್ ಕಂಡ ಶ್ರೇಷ್ಠ ಆಲ್ರೌಂಡರ್. ಅವರೇನಾದರೂ ಇಂದು ಆಡುತ್ತಿದ್ದರೆ ಐಪಿಎಲ್ನಲ್ಲಿ 25 ಕೋಟಿಗೆ ಮಾರಾಟವಾಗುತ್ತಿದ್ದರು ಎಂದು ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ಖಾಸಗಿ ಚಾನಲ್ ನ ಕಾರ್ಯಕ್ರಮದಲ್ಲಿ ಕಪಿಲ್ ದೇವ್ ಹಾಗೂ ಸುನಿಲ್ ಗವಾಸ್ಕರ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಪಿಲ್ ಅವರ 1983 ವಿಶ್ವಕಪ್ ಕೆಲವು ಸನ್ನಿವೇಶಗಳನ್ನು ನೆನೆಪಿಸಿಕೊಂಡ ಗವಾಸ್ಕರ್, ಜಿಂಬಾಬ್ವೆ ವಿರುದ್ಧ ಕಪಿಲ್ ಅವರ 175 ರನ್ ಗಳ ಏಕಾಂಗಿ ಹೋರಾಟ ಸ್ಮರಿಸಿಕೊಂಡರು. 1983ರ ವಿಶ್ವಕಪ್ ನಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಕೇವಲ 13 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ದ ನಾಯಕ ಕಪಿಲ್ ದೇವ್ ಅಜೇಯ 175 ರನ್ ಬಾರಿಸಿದ್ದರು. ಅವರ ಆ ಅದ್ಭುತ ಇನಿಂಗ್ಸ್ ಇರದಿದ್ದರೆ ನಾವು 80 ರನ್ ಕೂಡ ದಾಟಲಾಗುತ್ತಿರಲಿಲ್ಲ ಎಂದು ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಈಗ ಕ್ರಿಕೆಟ್ ಆಡುವಂತಿದ್ದರೆ ಅವರೇ ಜಗತ್ತಿನ ಬೆಲೆಬಾಳುವ ಕ್ರಿಕೆಟರ್ ಆಗಿರುತ್ತಿದ್ದು, 25 ಕೋಟಿಗೆ ಮಾರಾಟವಾಗುತ್ತಿದ್ದರು. ಇಂದು ಕೂಡಾ 7 ರಿಂದ 8 ಕೋಟಿಗೆ ಖರೀದಿಸಬಹುದು ಎಂದು ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ಇವರ ಮಾತು ಕೇಳಿದ ನಂತರ ಮಾತನಾಡಿದ ಕಪಿಲ್ ಆಗೇನಾದರು 25 ಕೋಟಿಗೆ ಮಾರಾಟವಾದರೆ ಸನ್ನಿಗೆ 10-15 ಕೋಟಿ ಕೊಡುತ್ತಿದ್ದೆ ಎಂದಿದ್ದಾರೆ. ಈ ಮಾತು ಕೇಳಿ ನೆರೆದಿದ್ದ ವೀಕ್ಷಕ ವರ್ಗ ನಗೆಗಡಲಲ್ಲಿ ತೇಲಾಡಿತು.ಕಪಿಲ್ ದೇವ್ ಅವರು ಆ ಒಂದು ಇನಿಂಗ್ಸ್ ಇಂದಿಗೂ ಏಕದಿನ ಕ್ರಿಕೆಟ್ನ ಅತ್ಯುತ್ತಮ ಇನಿಂಗ್ಸ್ ಆಗಿ ಉಳಿದಿದೆ. ಕಪಿಲ್ ದೇವ್ 138 ಎಸೆತಗಳಲ್ಲಿ 175 ರನ್ ಗಳಿಸಿದ್ದರು. ಇದರಲ್ಲಿ 16 ಬೌಂಡರಿ, 6 ಸಿಕ್ಸರ್ ಸೇರಿತ್ತು. ಈ ಪಂದ್ಯದಲ್ಲಿ ಭಾರತ 31 ರನ್ಗಳ ಜಯ ಸಾಧಿಸಿತು. ವಿಶ್ವಕಪ್ ಕೂಡ ಎತ್ತಿ ಹಿಡಿದಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos