ಚಾರುಲತಾ ಅವರನ್ನು ವರಿಸಿದ ಸಂಜು ಸ್ಯಾಮ್ಸನ್ 
ಕ್ರಿಕೆಟ್

ಬಾಲ್ಯದ ಗೆಳತಿ ಚಾರುಲತಾ ವರಿಸಿದ ಕ್ರಿಕೆಟಿಗ ಸಂಜು ಸ್ಯಾಮ್ಸನ್

ಟೀಂ ಇಂಡಿಯಾದ ಭರವಸೆಯ ವಿಕೆಟ್ ಕೀಪರ್ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ.

ಕೊಚ್ಚಿ: ಟೀಂ ಇಂಡಿಯಾದ ಭರವಸೆಯ ವಿಕೆಟ್ ಕೀಪರ್ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ.
ಸಂಜು ತಮ್ಮ ದೀರ್ಘ ಕಾಲದ ಪ್ರೇಯಸಿ ಹಾಗೂ ಕಾಲೇಜು ಗೆಳತಿ ಚಾರುಲತಾ ಅವರನ್ನು ಡಿಸೆಂಬರ್ 22 ಶನಿವಾರದಂದು ವರಿಸಿದ್ದಾರೆ ಎಂದು ತಿಳಿದುಬಂದಿದೆ.  ತವರೂರು ಕೇರಳದ ಕೋವಳಂ ರಿಸಾರ್ಟ್‌ನಲ್ಲಿ ಸರಳ ಸಮಾರಂಭದಲ್ಲಿ ಸಂಜು, ಗೆಳತಿ ಚಾರುಲತಾ ವರಿಸುವ ಮೂಲಕ ಜೀವನದಲ್ಲೂ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ವಿವಾಹ ಸಮಾರಂಭದಲ್ಲಿ ಗುರು ರಾಹುಲ್ ದ್ರಾವಿಡ್ ಸಹ ಭಾಗವಹಿಸಿರುವುದು ವಿಶೇಷವೆನಿಸಿತ್ತು. ಸಂಜು ಬೆಳವಣಿಗೆಯಲ್ಲಿ ದ್ರಾವಿಡ್ ಮಹತ್ವದ ಪಾತ್ರ ವಹಿಸಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಸಂಜು, ಭಾರತೀಯ ಕ್ರಿಕೆಟ್ ತಂಡದ ಬಾಗಿಲು ನಿರಂತರ ತಟ್ಟುತ್ತಲೇ ಇದ್ದಾರೆ.
24ರ ಹರೆಯದ ಸಂಜು, 2015 ಜುಲೈ 19ರಂದು ನ್ಯೂಜಿಲೆಂಡ್ ವಿರುದ್ಧ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟಿದ್ದರು. ಏಕಮಾತ್ರ ಪಂದ್ಯದಲ್ಲಿ ಸಂಜು 19 ರನ್ ಗಳಿಸಿದ್ದರು. 2014ರಲ್ಲಿ ಇಂಗ್ಲೆಂಡ್ ಏಕದಿನ ಸರಣಿಗೂ ಆಯ್ಕೆಯಾಗಿದ್ದರೂ ಆಡುವ ಅವಕಾಶ ದೊರಕಿರಲಿಲ್ಲ. 2017ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 1000 ರನ್ ಗಳಿಸಿದ ಅತಿ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದರು. ಅಷ್ಟೇ ಯಾಕೆ ರಣಜಿ ತಂಡವನ್ನು ಮುನ್ನಡೆಸಿದ ಅತಿ ಕಿರಿಯ ಕಪ್ತಾನ ಎಂಬ ದಾಖಲೆಯೂ ಸಂಜು ಹೆಸರಲ್ಲಿದೆ. 
ಇನ್ನು ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದ ಅತಿ ಕಿರಿಯ ಆಟಗಾರ ಎಂಬ ದಾಖಲೆಯನ್ನು ಸಂಜು ಬರೆದಿದ್ದರು. 2013ರಲ್ಲಿ ಐಪಿಎಲ್ ನ ಬೆಸ್ಟ್ ಯಂಗ್ ಪ್ಲೇಯರ್ ಪ್ರಶಸ್ತಿಗೂ ಸಂಜು ಭಾಜನವಾಗಿದ್ದರು. ಮನೀಶ್ ಪಾಂಡೆ ಬಳಿಕ ಐಪಿಎಲ್‌ನಲ್ಲಿ ಶತಕ ಬಾರಿಸಿದ ಎರಡನೇ ಅತಿ ಕಿರಿಯ ಬ್ಯಾಟ್ಸ್‌ಮನ್ ಎಂಬ ದಾಖಲೆಗೂ ಪಾತ್ರವಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ