ಮೆಲ್ಬರ್ನ್ : ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾವನ್ನು ಬಲಗೊಳಿಸುವ ನಿಟ್ಟಿನಲ್ಲಿ ಬ್ಯಾಟ್ಸ್ ಮನ್ ಗಳು ಸಾಮೂಹಿಕ ಪ್ರದರ್ಶನಕ್ಕೆ ಒತ್ತು ನೀಡುವಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಮೂರನೇ ಟೆಸ್ಟ್ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೊಹ್ಲಿ, ಬೌಲಿಂಗ್ ಪ್ರದರ್ಶನ ಉತ್ತಮವಾಗಿದೆ. ಆದರೆ, ಬ್ಯಾಟಿಂಗ್ ವಿಭಾಗದಲ್ಲಿ ಭರವಸೆ ಬೆಳೆಸಿಕೊಳ್ಳಬೇಕಾಗಿದೆ. ಸ್ಕೂರ್ ಬೋರ್ಡ್ ಮೇಲೆ ರನ್ ಗಳ ಮೇಲೆ ಗಮನ ಹರಿಸಬೇಕಾಗಿದೆ. ಇಲ್ಲದಿದ್ದರೆ ಬೌಲರ್ ಏನೂ ಮಾಡಲು ಸಾಧ್ಯವಾಗದೆ ಪರದಾಡುವಂತಾಗುತ್ತದೆ ಎಂದಿದ್ದಾರೆ.
ಒಂದು ವೇಳೆ ದ್ವಿತೀಯ ಭಾಗವಾಗಿ ಬ್ಯಾಟಿಂಗ್ ಮಾಡಿದ್ದರೆ ಲೀಡ್ ಪಡೆಯಲು ಪ್ರಯ್ನತಿಸಬಹುದು ಅಥವಾ ಎದುರಾಳಿ ಸನ್ನಿಹದಲ್ಲಿರಲು ಸಾಧ್ಯವಿರುತ್ತದೆ.ಸಮಪ್ರಮಾಣದಲ್ಲಿ ಬೃಹತ್ ಮೊತ್ತ ಗಳಿಸಿದ್ದರೆ ಇದು ಸೆಕೆಂಡ್ ಇನ್ನಿಂಗ್ಸ್ ಪಂದ್ಯದಲ್ಲೂ ಮುಂದುವರೆಬಹುದು, ಒಂದು ವೇಳೆ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಲೀಡ್ ಹೊಂದಿದ್ದರೆ ಅದನ್ನೇ ಲಾಭ ಮಾಡಿಕೊಳ್ಳಬಹುದು ಆದ್ದರಿಂದ ಬ್ಯಾಟ್ಸ್ ಮನ್ ಗಳು ಸಾಮೂಹಿಕ ಪ್ರದರ್ಶನದತ್ತ ಒತ್ತು ನೀಡಬೇಕು, ಉತ್ತಮ ಪ್ರದರ್ಶನ ತೋರಬೇಕು ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos