ಕ್ರಿಕೆಟ್

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ಮಾಯಾಂಕ್ ಆಕರ್ಷಕ ಅರ್ಧಶತಕ, ಭಾರತ 86/1

Srinivasamurthy VN
ಮೆಲ್ಬೋರ್ನ್: ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭಕ ಆಟಗಾರ ಮಾಯಾಂಕ್ ಅಗರ್ವಾಲ್ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ.
ಮಾಯಾಂಕ್ ಅಗರ್ವಾಲ್ ಗೆ ಇದು ಪದಾರ್ಪಣೆ ಪಂದ್ಯವಾಗಿದ್ದು, ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ತಮ್ಮ ಉತ್ಸಾಹ ಹೆಚ್ಚಿಸಿಕೊಂಡಿದ್ದಾರೆ. ಇನ್ನು ಎಂಸಿಜಿ ಮೈದಾನದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡದ ಆರಂಭಿಕರಾದ ಹನುಮವಿಹಾರಿ ಮತ್ತು ಮಾಯಾಂಕ್ ಅಗರ್ವಾಲ್ ಆತ್ಮ ವಿಶ್ವಾಸದಲ್ಲೇ ಬ್ಯಾಟಿಂಗ್ ಆರಂಭಿಸಿದರು. ಉತ್ತಮ ಹೊಡೆತಗಳ ಮೂಲಕ ಈ ಜೋಡಿ 40 ರನ್ ಕಲೆಹಾಕಿತು. ಆದರೆ 8 ರನ್ ಗಳಿಸಿದ್ದ ಹನುಮ ವಿಹಾರಿ ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಫಿಂಚ್ ಗೆ ಕ್ಯಾಚಿತ್ತು ಹೊರ ನಡೆದರು. ಆ ಮೂಲಕ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು.
ಆದರೆ ಆ ಬಳಿಕ ಪೂಜಾರ ಜೊತೆಗೂಡಿದ ಮಾಯಾಂಕ್ ಉತ್ತಮ ಇನ್ನಿಂಗ್ಸ್ ಕಟ್ಟಲು ಮುಂದಾದರು. ಬೌಂಡರಿಗಳ ಸಮೇತ ಮಾಯಾಂಕ್ ಅರ್ಧಶತಕ ಸಿಡಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇನ್ನು ಮಾಯಾಂಕ್ ಗೆ ಪೂಜಾರ ಉತ್ತಮ ಸಾಥ್ ನೀಡುತ್ತಿದ್ದು, ತಾಳ್ಮೆಯ ಆಟದ ಮೂಲಕ 19 ರನ್ ಗಳಿಸಿದ್ದಾರೆ.
ಇತ್ತೀಚಿನ ವರದಿಗಳು ಬಂದಾಗ ಭಾರತ ತಂಡ 1 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿತ್ತು.
SCROLL FOR NEXT