ವಿಕೆಟ್ ಪಡೆದ ಸಂಭ್ರಮದಲ್ಲಿ ಬುಮ್ರಾ 
ಕ್ರಿಕೆಟ್

ಬುಮ್ರಾ ದಾಳಿಗೆ ನಲುಗಿದ ಕಾಂಗರೂ, ಕೇವಲ 151 ರನ್ ಗಳಿಗೆ ಆಲೌಟ್, 292 ರನ್ ಹಿನ್ನಡೆ

ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ಕೇಲಿಯಾ ತಂಡ ಕೇವಲ 151 ರನ್ ಗಳಿಗೆ ಆಲೌಟ್ ಆಗಿದೆ.

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ಕೇಲಿಯಾ ತಂಡ ಕೇವಲ 151 ರನ್ ಗಳಿಗೆ ಆಲೌಟ್ ಆಗಿದೆ.
ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ಅವರ ದಾಳಿಗೆ ತತ್ತರಿಸಿದ ಟಿಮ್ ಪೈನೆ ಪಡೆ ಕೇವಲ 151 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಬರೊಬ್ಬರಿ 292 ರನ್ ಗಳ ಮೊದಲ ಇನ್ನಿಂಗ್ಸ್  ಹಿನ್ನಡೆ ಅನುಭವಿಸಿದೆ. ನಿನ್ನೆ ವಿಕೆಟ್ ನಷ್ಟವಿಲ್ಲದೇ 8 ರನ್ ಗಳಿಸಿದ್ದ ಆಸ್ಟ್ರೇಲಿಯಾ ಇಂದು ಭಾರತೀಯ ಬೌಲರ್ ಗಳ ದಾಳಿಗೆ ಅಕ್ಷರಶಃ ನಲುಗಿ ಹೋಯಿತು. ತಂಡದ ಮೊತ್ತ ಕೇವಲ 24 ರನ್ ಗಳಾಗಿದ್ದಾಗಲೇ ಇಶಾಂತ್ ಶರ್ಮಾ ಮೊದಲ ಆಘಾತ ನೀಡಿದರು. ಕೇವಲ 8 ರನ್ ಗಳಿಸಿದ್ದ ಫಿಂಚ್ ಮಯಾಂಕ್ ಅಗರ್ವಾಲ್ ಗೆ ಕ್ಯಾಚಿತ್ತು ಹೊರ ನಡೆದರು. ಆ ಬಳಿಕ ಮತ್ತೋರ್ವ ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ ರನ್ನು ಬುಮ್ರಾ ಪೆವಿಲೆಯನ್ ಗೆ ಅಟ್ಟಿದರು. 2ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಉಸ್ಮಾನ್ ಖವಾಜರನ್ನು ರವೀಂದ್ರ ಜಡೇಜಾ ಔಟ್ ಮಾಡಿದರೆ, ಶಾನ್ ಮಾರ್ಶ್ ರನ್ನು ಬುಮ್ರಾ ಎಲ್ ಬಿ ಬಲೆಗೆ ಕೆಡವಿದರು.
ಬಳಿಕ ಬಂದ ಟ್ರಾವಿಸ್ ಹೆಡ್ 20 ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು.  9 ರನ್ ಗಳಿಸಿದ್ದ ಮಿಚೆಲ್ ಮಾರ್ಶ್ ಜಡೇಜಾ ಬೌಲಿಂಗ್ ನಲ್ಲಿ ಔಟ್ ಆದರು. ಬಳಿಕ ಬಾಲಂಗೋಚಿ ಆಟಗಾರ ಪ್ಯಾಟ್ ಕಮಿನ್ಸ್ (17 ರನ್) ಔಟ್ ಆದರೆ, ಅವರ ಬೆನ್ನಲ್ಲೇ ನಾಯಕ ಟಿಮ್ ಪೈನೆ ಕೂಡ 22 ರನ್ ಗಳಿಸಿ ಮತ್ತದೇ ಬುಮ್ರಾ ಬೌಲಿಂಗ್ ನಲ್ಲಿ ಔಟ್ ಆದರು. ಪೈನೆ ಔಟಾಗುತ್ತಿದ್ದಂತೆಯೇ ನಾಥನ್ ಲಿಯಾನ್ ಮತ್ತು ಹೆಜಲ್ ವುಡ್ ಶೂನ್ಯಕ್ಕೆ ಔಟ್ ಆಗುವುದರೊಂದಿಗೆ ಆಸಿಸ್ ಪಡೆ 151 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಇನ್ನು ಭಾರತದ ಪರ ಜಸ್ ಪ್ರೀತ್ ಬುಮ್ರಾ 6, ಜಡೇಜಾ 2,  ಇಶಾಂತ್ ಶರ್ಮಾ ಮತ್ತು ಮೊಹಮದ್ ಶಮಿ ತಲಾ 1 ವಿಕೆಟ್ ಪಡೆದು ಆಸಿಸ್ ಪತನಕ್ಕೆ ಕಾರಣರಾದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್