ವಿರಾಟ್ ಕೊಹ್ಲಿ ಸಂಭ್ರಮ 
ಕ್ರಿಕೆಟ್

3ನೇ ಟೆಸ್ಟ್: ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಆಸಿಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ನಿರೀಕ್ಷೆಯಂತೇ 3ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಟೀಂ ಇಂಡಿಯಾ ಬಗ್ಗು ಬಡಿದಿದ್ದು, ಕಾಂಗರೂಗಳ ವಿರುದ್ಧ 137 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಮೆಲ್ಬೋರ್ನ್: ನಿರೀಕ್ಷೆಯಂತೇ 3ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಟೀಂ ಇಂಡಿಯಾ ಬಗ್ಗು ಬಡಿದಿದ್ದು, ಕಾಂಗರೂಗಳ ವಿರುದ್ಧ 137 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ನಿನ್ನೆ 4ನೇ ದಿನದಾಟ ಮುಕ್ತಾಯಕ್ಕೆ 258 ರನ್ ಗಳಿಗೆ  8 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ಪ್ಯಾಟ್ ಕಮಿನ್ಸ್ ಆಸರೆಯಾಗಿ ನಿಂತಿದ್ದರು. 63 ರನ್ ಗಳಿಸಿದ ಅವರು ನಿಜಕ್ಕೂ ಆಸಿಸ್ ತಂಡದ ಸೋಲನ್ನು 5ನೇ ದಿನಕ್ಕೆ ಮುಂದೂಡಿದ್ದರು. ಆದರೆ ಇಂದು ಆಸ್ಟ್ರೇಲಿಯಾ ತಂಡ ಕೇವಲ 3 ರನ್ ಸೇರುಸುವಷ್ಟರಲ್ಲಿ ಬಾಕಿ ಉಳಿದಿದ್ದ 2 ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾಗೆ ಶರಣಾಗಿದೆ.
ಇಂದು ಒಟ್ಟು ಆಸ್ಟ್ರೇಲಿಯಾ ತಂಡ ಐದು ಓವರ್ ಗಳನ್ನು ಎದುರಿಸಿತ್ತು. ಮೊದಲ 3 ಓವರ್ ನಲ್ಲಿ ಭಾರತಕ್ಕೆ ಯಾವುದೇ ಯಶಸ್ಸು ದೊರೆಯಲಿಲ್ಲ. ಆದರೆ ನಾಲ್ಕನೇ ಓವರ್ ನ 2ನೇ ಎಸೆತದಲ್ಲಿ ಭಾರತಕ್ಕೆ ಅಪಾಯಕಾರಿಯಾಗಿದ್ದ ಪ್ಯಾಟ್ ಕಮಿನ್ಸ್ ರನ್ನು ಬುಮ್ರಾ ಔಟ್ ಮಾಡಿದರು. ಇದು ಭಾರತಕ್ಕೆ ಗೆಲುವು ಖಚಿತ ಪಡಿಸಿತ್ತು. ಬಳಿಕ ನಂತರದ ಓವರ್ ನಲ್ಲೇ ಇಶಾಂತ್ ಶರ್ಮಾ ಲೈಯಾನ್ ರನ್ನು ಔಟ್ ಮಾಡುವುದರೊಂದಿಗೆ ಭಾರತ ಮೂರನೇ ಪಂದ್ಯವನ್ನು 137 ರನ್ ಗಳ ಅಂತರದಲ್ಲಿ ಗೆದ್ದು ಬೀಗಿತು.
ಆ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರಲ್ಲಿ ಮುನ್ನಡೆ ಸಾಧಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಯುದ್ಧದ ಕುರಿತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಮೋದಿ ಮಹತ್ವದ ಮಾತುಕತೆ

ಗುಜರಾತ್: ರಾಹುಲ್ ಗಾಂಧಿ ಪರ ವಕಾಲತ್ತು ವಹಿಸಿದ್ದ ವಕೀಲ ಫಿರೋಜ್ ಪಠಾಣ್ ಮೃತದೇಹ ತಾಪಿ ನದಿಯ ದಡದಲ್ಲಿ ಪತ್ತೆ!

ಭಾರತಕ್ಕೆ ಉತ್ತಮ ವಿರೋಧಪಕ್ಷಕ್ಕಾಗಿ ಅಭಿಯಾನ ಅಗತ್ಯ: ಸೀತಾರಾಮನ್

ಧರ್ಮಸ್ಥಳ ಬುರುಡೆ ರಹಸ್ಯ ಬಹಿರಂಗ: ಮುಸುಕುಧಾರಿಗೆ 'ಬುರುಡೆ' ಕೊಟ್ಟಿದ್ದು ಸೌಜನ್ಯ ಮಾವ!

ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ; ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಅನುಷ್ಠಾನ

SCROLL FOR NEXT