ಕ್ರಿಕೆಟ್

2018ರ ವಿಶ್ವಕಪ್ ಅಂಡರ್ 19 ಟ್ರೋಫಿ ಗೆದ್ದ ತಂಡ ವಿಶ್ವ ದಾಖಲೆ ಬರೆಯಲಿದೆ!

Vishwanath S
ಐಸಿಸಿ ಅಂಡರ್ 19 ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಮುಖಾಮುಖಿಯಾಗಲಿದ್ದು ಇಂದು ಚಾಂಪಿಯನ್ ಪಟ್ಟ ಅಂಕರಿಸುವ ತಂಡ ವಿಶ್ವ ದಾಖಲೆ ಬರೆಯಲಿದೆ.
ಉಭಯ ತಂಡಗಳು ಪಂದ್ಯಾವಳಿಯಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ನಾಳಿನ ಪಂದ್ಯದಲ್ಲಿ ಗೆಲುವು ಸಾಧಿಸುವವರು ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಅತೀ ಹೆಚ್ಚು ವಿಶ್ವಕಪ್ ಗೆದ್ದ ಇತಿಹಾಸ ನಿರ್ಮಿಸಲಿವೆ.
ಭಾರತ ಅಂಡರ್ 19 ತಂಡವನ್ನು ಪೃಥ್ವಿ ಶಾ ಮುನ್ನಡೆಸುತ್ತಿದ್ದಾರೆ. ಈ ಹಿಂದೆ 2000ರಲ್ಲಿ ಮೊಹಮ್ಮದ್ ಕೈಫ್ ಭಾರತವನ್ನು ಮುನ್ನಡೆಸಿದ್ದು ಮೊದಲ ಬಾರಿಗೆ ಅಂಡರ್ 19 ವಿಶ್ವಕಪ್ ಗೆದ್ದಿದ್ದರು. ನಂತರ 2008ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ 2ನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಇನ್ನು 2012ರಲ್ಲಿ ಉನ್ಮುಕ್ ಚಾಂದ್ ಪಡೆ ವಿಶ್ವಕಪ್ ಗೆದ್ದಿತ್ತು.
ಆಸ್ಟ್ರೇಲಿಯಾ ಸಹ ಮೂರು ಬಾರಿ ವಿಶ್ವಕಪ್ ಗೆದ್ದು ಬೀಗಿದೆ. ಆಸ್ಟ್ರೇಲಿಯಾ ಮೊದಲ ಬಾರಿಗೆ 1988, 2002 ಮತ್ತು 2010ರಲ್ಲಿ ವಿಶ್ವಕಪ್ ಗೆ ಮುತ್ತಿಟ್ಟಿತ್ತು.
ಟೀಂ ಇಂಡಿಯಾದ ಮಾಜಿ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಪೃಥ್ವಿ ಶಾ ಪಡೆ ಬಲಿಷ್ಠ ತಂಡವಾಗಿದ್ದು ಟೂರ್ನಿಯಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.
SCROLL FOR NEXT