ಅಂಡರ್ 19 ವಿಶ್ವಕಪ್ ಗೆದ್ದಿರುವ ಭಾರತ ತಂಡದ ಬಗ್ಗೆ ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಂಡರ್ 19 ತಂಡಕ್ಕೆ ವಿಶ್ವಕಪ್ ನಂತಹ ಮತ್ತಷ್ಟು ಸವಿ ನೆನಪುಗಳಿರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಂಡರ್-19 ವಿಶ್ವಕಪ್ ಗೆಲ್ಲುವುದಕ್ಕೆ ತಂಡ, ಸಿಬ್ಬಂದಿಗಳ ಬೆಂಬಲವೂ ಕಾರಣ ಎಂದು ಹೇಳಿರುವ ದ್ರಾವಿಡ್, ತಂಡದ ಆಟಗಾರರ ಶ್ರಮದ ಬಗ್ಗೆ ಹೆಮ್ಮೆ ಇದೆ, ಈ ನೆನಪು ಹಲವು ಕಾಲ ಉಳಿಯುವಂಥಹದ್ದು, ಇಂತಹ ಮತ್ತಷ್ಟು ಸವಿ ನೆನಪುಗಳು ಇರಲಿವೆ ಎಂದು ದ್ರಾವಿಡ್ ಹೇಳಿದ್ದಾರೆ.