ವಿರಾಟ್ ಕೊಹ್ಲಿ-ಪೃಥ್ವಿ ಶಾ 
ಕ್ರಿಕೆಟ್

ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಯುವ ಪಡೆ ನಾಯಕ ಪೃಥ್ವಿ ಶಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಭಾರತ ಅಂಡರ್ 19 ತಂಡದ ನಾಯಕ ಪೃಥ್ವಿ ಶಾ ಸರಿಗಟ್ಟಿದ್ದಾರೆ...

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ವಿಶೇಷ ದಾಖಲೆಯೊಂದನ್ನು ಭಾರತ ಅಂಡರ್ 19 ತಂಡದ ನಾಯಕ ಪೃಥ್ವಿ ಶಾ ಸರಿಗಟ್ಟಿದ್ದಾರೆ. 
ಪೃಥ್ವಿ ಶಾ ತಮ್ಮ 19 ವಯೋಮಿತಿ ಕ್ರಿಕೆಟ್ ಜೀವನವನ್ನು ನಾಯಕನಾಗಿ ಶೇಕಡ 100ರಷ್ಟು ನಿರ್ವಹಣೆಯೊಂದಿಗೆ ಮುಗಿಸಿದ್ದು ಈ ಮೂಲಕ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದಿದ್ದಾರೆ. 
ಐಸಿಸಿ ಅಂಡರ್ 19 ವಿಶ್ವಕಪ್ ಪಂದ್ಯಾವಳಿಯಲ್ಲಿ 6 ಪಂದ್ಯಗಳನ್ನು ಆಡಿರುವ ಪೃಥ್ವಿ ಶಾ 65.25ರ ಸರಾಸರಿಯಲ್ಲಿ 261 ರನ್ ಗಳಿಸಿದ್ದಾರೆ. ಅದೇ ವಿರಾಟ್ ಕೊಹ್ಲಿ 6 ಪಂದ್ಯಗಳಿಂದ 47ರ ಸರಾಸರಿಯಲ್ಲಿ 235 ರನ್ ಗಳಿಸಿದ್ದರು.
ಅದಲ್ಲದೆ 19 ವಯೋಮಿತಿ ವಿಶ್ವಕಪ್ ಗೆದ್ದ ಅತೀ ಕಿರಿಯ ನಾಯಕ ಪೃಥ್ವಿ ಶಾ. 18 ವರ್ಷ 86ನೇ ದಿನದಲ್ಲಿ ಪೃಥ್ವಿ ಶಾ ಪ್ರಶಸ್ತಿ ಜಯಿಸುವ ಮೂಲಕ, ಆಸ್ಟ್ರೇಲಿಯಾ ಮಿಚೆಲ್ ಮಾರ್ಷ್(18 ವರ್ಷ, 102ದಿನ) ದಾಖಲೆಯನ್ನು ಹಿಂದೆ ಹಾಕಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT