ವಿರಾಟ್ ಕೊಹ್ಲಿಯನ್ನು ನೋಡಿ ನಾನು ಬಹಳಷ್ಟು ಕಲಿಯಬಹುದು: ಐಡೆನ್ ಮಾರ್ಕ್ರಾಮ್ 
ಕ್ರಿಕೆಟ್

ವಿರಾಟ್ ಕೊಹ್ಲಿಯನ್ನು ನೋಡಿ ನಾನು ಬಹಳಷ್ಟು ಕಲಿಯಬಹುದು: ಐಡೆನ್ ಮಾರ್ಕ್ರಾಮ್

ವಿರಾಟ್ ಕೊಹ್ಲಿ ಅವರ ನಾಯಕತ್ವದ ಕೆಲ ಅಂಶಗಳು ಭಾರತ ತಂಡಕ್ಕೆ ಅರ್ಹ ಗೆಲುವನ್ನು ತಂದುಕೊಟ್ಟಿದೆ

ಸೆಂಚುರಿಯನ್(ದಕ್ಷಿಣ ಆಫ್ರಿಕಾ): ವಿರಾಟ್ ಕೊಹ್ಲಿ ಅವರ ನಾಯಕತ್ವದ ಕೆಲ ಅಂಶಗಳು ಭಾರತ ತಂಡಕ್ಕೆ ಅರ್ಹ ಗೆಲುವನ್ನು ತಂದುಕೊಟ್ಟಿದೆ. ದಕ್ಷಿಣ ಆಫ್ರಿಕಾದ ನಾಯಕ ಐಡೆನ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ಸರಣಿಯನ್ನು ಭಾರತ 5-1ರಿಂಡ ಜಯಿಸಿತ್ತು. ಭಾರತದ ಪಾಲಿಗೆ ಐತಿಹಾಸಿಕ ಜಯವಾಗಿದ್ದ ಈ ವಿಜಯದ ಬಳಿಕ ದಕ್ಷಿಣ ಆಫ್ರಿಕಾ ನಾಯಕ ಈ ಮಾತನ್ನಾಡಿದ್ದಾರೆ.
"ತಂಡದ ಗೆಲುವಿನ ಹಿಂದೆ ನಾಯಕ ಕೊಹ್ಲಿ ಒತ್ತಡ ಬಹಳ ಕೆಲಸ ಮಾಡಿದೆ. ಅವರು ಸ್ಪರ್ಧಾತ್ಮಕತೆಯಿಂದ ಆಡುತ್ತಾರೆ, ಇದರಲ್ಲಿ ಯಾವ ದುರುದ್ದೇಶವಿರುವುದಿಲ್ಲ. ನಾನು ಅವರಿಂದ ಕಲಿಯಬಹುದಾದ ಬಹಳಷ್ಟು ವಿಷಯಗಳಿವೆ. " ಮಾಧ್ಯಮ ಸಂವಹನದ ಸಮಯದಲ್ಲಿ ಮಾರ್ಕ್ರಾಮ್ ಹೇಳಿದರು.
"ಕೊಹ್ಲಿ ಸಾಕಷ್ಟು ಉತ್ತಮ ಸ್ಥಾನದಲ್ಲಿದ್ದಾರೆ.  ಅವರಲ್ಲಿದ್ದ ರನ್ ಗಳ ದಾಹ ಹಾಗೂ ಆಟ ಮುಗಿಸುವ ಸಂಬಂಧದಲ್ಲಿನ ಒತ್ತಡವೇನಿದೆ, ಇದು ಅತ್ಯುತ್ತಮವಾದದ್ದು ಈ ಕಾರಣದಿಂಡಲೇ ಅವರು ವಿಶ್ವದ ಅತ್ಯುತ್ತಮ ಆಟಗಾರರಾಗಿದ್ದಾರೆ. ಭಿನ್ನಾಭಿಪ್ರಾಯಗಳೇನೇ ಇದ್ದರೂ ಅವರ ತಂಡದವರೆಲ್ಲರೂ ತಂಡದ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು
ಸರಣಿ ಸೋಲಿನ ಬಗೆಗೆ ತಮ್ಮ ಅಭಿಪ್ರಾಯ ತಿಳಿಸಿದ ದಕ್ಷಿಣ ಆಫ್ರಿಕಾ ತಂಡದ ನಾಯಕ "ಮುಜುಗರ ಎನ್ನುವುದು ಸರಣಿಯ ಫಲಿತಾಂಶಕ್ಕೆ ಹೋಲಿಸಿದಾಗ ತುಸು ದೊಡ್ಡ ಪದವಾಗಿದೆ. ನಿಸ್ಸಂಶಯವಾಗಿ, ನಾವು ಇಷ್ಟಪಡುವಂತೆ ಫಲಿತಾಂಶ ಬಂದಿಲ್ಲ. ನಾನು ತಂಡದ ನಾಯಕನಾಗಿ ಈ ಫಲಿತಾಂಶದ ಬಗ್ಗೆ ನಿರಾಶನಾಗಿದ್ದೇನೆ" ಎಂದರು.
"ನಾವು ಬಹಳ ಕಠಿಣ ಅಭ್ಯಾಸದಲ್ಲಿ ತೊಡಗಿದ್ದೇವೆ, ನಾವು ಇನ್ನಷ್ಟು ಅತ್ಯುತ್ತಮವಾದದ್ದನ್ನು ನೀಡಲಿದ್ದೇವೆ. ಭಾರತದ ಎದುರಿನ ಸರಣಿ ಸೋಲು ನಿರಾಶೆ ತಂದಿದೆ.
"ನಾನು ಭಾರತದೆದುರಿನ ಸರಣಿಯನ್ನು ಸಾಕಷ್ಟು ಸಂತಸದಿಂದ ಆಡಿದ್ದೇನೆ. ನಾನು ಅವರಿಂಡ ಸಾಕಷ್ಟು ಕಲಿತಿದ್ದೇನೆ. ಸೋಲು  ನಿರಾಶೆ ತಂದಿದ್ದು ನಿಜ ಆದರೆ ಭಾರತದ ವಿರುದ್ಧದ ಸರಣಿ ಅತ್ಯಂತ ಕಠೀಣವಾದದ್ದೆಂದು ನಾನು ಮೊದಲೇ ಯೋಜಿಸಿದ್ದೆ.  ನಾನು ಪಾಠಗಳನ್ನು ಕಲಿಯುತ್ತಾ ಮುಂದೆ ಸಾಗುತ್ತೇನೆ." ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT