ಬೆಂಗಳೂರು: ಚುಟುಕು ಕ್ರಿಕೆಟ್ ಟಿ20 ಇಲ್ಲದೆ ಕ್ರಿಕೆಟ್ ಗೆ ಉಳಿಗಾಲವಿಲ್ಲ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಕ್ರಿಕೆಟ್ ಇತಿಹಾಸವನ್ನು ಕಂಡಾಗ ಹಲವಾರು ಬದಲಾವಣೆಗಳು ಆಗಿವೆ. ಟೆಸ್ಟ್ ಕ್ರಿಕೆಟ್ ನಿಂದ ಹಿಡಿದು ಏಕದಿನ ಹಾಗೂ ಟಿ20 ಕ್ರಿಕೆಟ್ ವರೆಗೂ ಬಂದು ತಲುಪಿದ್ದು ಮನರಂಜನೆಯ ಭಾಗವಾಗಿರುವ ಟಿ20 ಕ್ರಿಕೆಟ್ ನ ಆಗಮನದ ಬಳಿಕ ಸಾಕಷ್ಟು ಜನಪ್ರಿಯವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಕ್ರಿಕೆಟ್ ಉಳಿಗಾಲಕ್ಕೆ ಟಿ20 ಅತಿ ಮುಖ್ಯ ಎಂಬುದನ್ನು ಸೌರವ್ ಗಂಗೂಲಿ ಹೇಳಿದ್ದಾರೆ.
ಇನ್ನು ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ದಾಖಲಿಸುವ ಮೂಲಕ ಸರಣಿ ಕೈವಶ ಮಾಡಿಕೊಳ್ಳಲಿದೆ ಎಂಬ ನಂಬಿಕೆ ಇದೆ ಎಂದು ಗಂಗೂಲಿ ಹೇಳಿದ್ದಾರೆ.