ಕ್ರಿಕೆಟ್

ಹಗಲು-ರಾತ್ರಿ ಟೆಸ್ಟ್: ಬಿಸಿಸಿಐನಲ್ಲಿ ಆಂತರಿಕ ಕಿತ್ತಾಟ!

Vishwanath S
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನಲ್ಲಿ ಮತ್ತೆ ಆಂತರಿಕ ಒಳಜಗಳಗಳು ಶುರುವಾಗಿದೆ. 
ಭಾರತ ಪ್ರವಾಸಕ್ಕೆ ಆಗಮಿಸಲಿರುವ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಒಂದು ಹಗಲುರಾತ್ರಿ ಟೆಸ್ಟ್ ಪಂದ್ಯವನ್ನು ಆಡಿಸಲು ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ ನಿರ್ಧರಿಸಿದ್ದಾರೆ. ತಮ್ಮ ಗಮನಕ್ಕೂ ತಾರದೇ ಕೆಲವೇ ಕೆಲವರು ಕುಳಿತು ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬಿಸಿಸಿಐ ನಿಯೋಜಿತ ಆಡಳಿತಾಧಿಕಾರಿ ವಿನೋದ್ ರಾಯ್ ಹರಿದಾಯ್ದಿದ್ದಾರೆ. ಜತೆಗೆ ತಾತ್ಕಾಲಿಕವಾಗಿ ಹಗಲು ರಾತ್ರಿ ಟೆಸ್ಟ್ ಆಡಿಸುವುದನ್ನು ತಡೆ ಹಿಡಿದಿದ್ದಾರೆ. 
ವಿನೋದ್ ರಾಯ್ ಅವರು ನನಗೆ ಕ್ರಿಕೆಟ್ ಗೊತ್ತಿಲ್ಲ ಅನ್ನುವುದು ಸರಿ. ನಿಮಗೆ ನನಗಿಂತ ಹೆಚ್ಚಿನ ಕ್ರಿಕೆಟ್ ಜ್ಞಾನವಿದೆ ಎನ್ನುವುದೂ ಸರಿ. ಆದರೆ ಡಯಾನಾ ಎಡುಲ್ಜಿ ನಿಮ್ಮೆಲ್ಲರಿಗಿಂತ ಹೆಚ್ಚಿನ ಕ್ರಿಕೆಟ್ ಜ್ಞಾನವಿದೆ. ಆದರೂ ನಮ್ಮೊಂದಿಗೆ ಚರ್ಚಿಸದೆ ನೀವು ಕೆಲವೇ ವ್ಯಕ್ತಿಗಳು ಕುಳಿತು ಇಂತಹ ನಿರ್ಧಾರ ತೆಗೆದುಕೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. 
ಇನ್ನು ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರ ಕೊರತೆಯನ್ನು ಆಧಾರವಾಗಿಟ್ಟುಕೊಂಡು ಕಾರ್ಯದರ್ಶಿ ಅಮಿತಾಭ್ ಚೌಧರಿ ಈ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಸಲಹೆ ನೀಡಿರುವ ರವಿಶಾಸ್ತ್ರಿ. ಪಂದ್ಯವನ್ನು ಮಧ್ಯಾಹ್ನ 2ರಿಂದ ಶುರು ಮಾಡಲು ಹೇಳಿದ್ದಾರೆ. ದ್ವಿತೀಯ ದರ್ಜೆಯ ತಂಡದ ವಿರುದ್ಧ ಆಡುವಾಗ ದ್ವಿತೀಯ ಹಂತದ ನಗರಗಳನ್ನೇ ಟೆಸ್ಟ್ ಗೆ ಆಯ್ಕೆ ಮಾಡಲು ಸೂಚಿಸಿದ್ದಾರೆ. 
SCROLL FOR NEXT