ನವದೆಹಲಿ: ಭಾರತ ಏಕದಿನ ಕ್ರಿಕೆಟ್ ಗೆ ಮರಳುವ ಉದ್ದೇಶದಿಂದ ನಾನು ಐಪಿಎಲ್ ಅನ್ನು ಎದುರುನೋಡುತ್ತಿಲ್ಲ..ಬದಲಿಗೆ ಈ ಬಾರಿ ಐಪಿಎಲ್ ನನಗೆ ವಿಶೇಷವಾಗಿದ್ದು, ದೊಡ್ಡ ಜವಾಬ್ದಾರಿಯೊಂದು ನನ್ನ ಮೇಲಿದೆ ಎಂದು ಭಾರತ ತಂಡ ಸ್ಪಿನ್ನರ್ ಆರ್ ಅಶ್ವಿನ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿ ಅಶ್ವಿನ್ ಆಯ್ಕೆಯಾಗಿದ್ದು, ಈ ಬಗ್ಗೆ ಹೆಮ್ಮೆಯಿಂದಲೇ ಆಂಗ್ಲ ಕ್ರೀಡಾ ವೆಬ್ ಸೈಟಿನೊಂದಿಗೆ ಮಾತನಾಡಿದ ಅಶ್ವಿನ್, ಕಿಂಗ್ಸ್ ಇಲೆವೆನ್ ತಂಡದ ಆಡಳಿತ ಮಂಡಳಿ ನನಗಿಂತಲೂ ಹಿರಿಯ ಮತ್ತು ನುರಿತ ಆಟಗಾರರು ತಂಡದಲ್ಲಿದ್ದಾಗ್ಯೂ ನನ್ನ ಮೇಲೆ ಭರವಸೆ ಇಟ್ಟು ಈ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ, ಹೀಗಾಗಿ ಈ ಜವಾಬ್ದಾರಿಯನ್ನು ನಾನು ಯಶಸ್ವಿಯಾಗಿ ನಿಭಾಯಿಸಬೇಕಿದೆ. ಪ್ರತೀ ಬಾರಿಯ ಐಪಿಎಲ್ ಟೂರ್ನಿಯಂತೆಯೇ ಈ ಬಾರಿಯ ಐಪಿಎಲ್ ನಲ್ಲೂ ನಾನು ಪಾಲ್ಗೊಳ್ಳುತ್ತಿದ್ದು, ಈ ಬಾರಿ ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ.
ಏಕದಿನ ತಂಡಕ್ಕಾಗಿ ಮರಳಬೇಕು ಎನ್ನುವ ಉದ್ದೇಶದಿಂದ ನಾನು ಈ ಬಾರಿಯ ಐಪಿಎಲ್ ಎದುರು ನೋಡುತ್ತಿಲ್ಲ. ಉತ್ತಮ ಪ್ರದರ್ಶನ ನೀಡಿದರೆ ತಾನೇ ತಾನಾಗಿ ತಂಡ ಸೇರಿಕೊಳ್ಳುತ್ತೇನೆ. ಕ್ರಿಕೆಟ್ ಮಾದರಿ ಯಾವುದೇ ಇರಲಿ ಉತ್ತಮ ಪ್ರದರ್ಶನವೊಂದೇ ನನ್ನ ಗುರಿ. ಕಳೆದ 10 ವರ್ಷಗಳಿಂದಲೂ ನಾನು ಕ್ರಿಕೆಟ್ ಆಡುತ್ತಿದ್ದೇನೆ. ಹಿರಿಯ ಆಟಗಾರರೊಂದಿಗೆ ಆಟವಾಡಲು ಯಾವುದೇ ಸಮಸ್ಯೆ ಇಲ್ಲ. ಪಂಜಾಬ್ ತಂಡದಲ್ಲೂ ಸಾಕಷ್ಟು ಹಿರಿಯ ಆಟಗಾರನ್ನು ಹೊಂದಿದೆ. ನಿಜಕ್ಕೂ ಇದು ಬಲಿಷ್ಟ ತಂಡವಾಗಿದ್ದು, ಇದೇ ಮೊದಲ ಬಾರಿಗೆ ನಾಯಕನ ಜವಾಬ್ದಾರಿ ಹೊತ್ತಿದ್ದೇನೆ. ನಿಜಕ್ಕೂ ಹೊಸ ಜವಾಬ್ದಾರಿಗಾಗಿ ನಾನು ಕಾತರದಿಂದ ಕಾಯುತ್ತಿದ್ದೇನೆ ಎಂದು ಅಶ್ವಿನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics