ಕ್ರಿಕೆಟ್

ಸ್ಪಾಟ್ ಫಿಕ್ಸಿಂಗ್: ಪಾಕಿಸ್ತಾನ ಕ್ರಿಕೆಟಿಗ ಶೆಹಜೈಬ್ ಹಸನ್ ಗೆ ಒಂದು ವರ್ಷ ನಿಷೇಧ

Raghavendra Adiga
ಲಾಹೋರ್(ಪಾಕಿಸ್ತಾನ): ಸೂಪರ್ ಲೀಗ್ ಪಂದ್ಯಾವಳಿಯಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿ ಸಿಕ್ಕಿಬಿದ್ದಿದ್ದ ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್'ಮನ್ ಶೆಹಜೈಬ್ ಹಸನ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ವರ್ಷದ ಮಟ್ಟಿಗೆ ಅಮಾನತು ಮಾಡಿದೆ.
ದುಬೈನಲ್ಲಿ ನಡೆದ ಎರಡನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್( ಪಿಎಸ್'ಎಲ್) ನಲ್ಲಿ ಭಾಗವಹಿಸಿದ್ದ ಶೆಹಜೈಬ್ ಅಲ್ಲಿ ಸ್ಪಾಟ್ ಫಿಕ್ಸಿಂಗ್ ನಲ್ಲಿ ಪಾಲ್ಗೊಂಡಿರುವುದು ತನಿಖೆಯಲ್ಲಿ ಸಾಬೀತಾಗಿತ್ತು. ಇದೀಗ ಪಿಸಿಬಿ ರಚನೆ ಮಾಡಿದ್ದ ವಿಶೇಷ ಸಮಿತಿಯ ವರದಿ ಹಿನ್ನೆಲೆಯಲ್ಲಿ ಆಟಗಾರನನ್ನು ಒಂದು ವರ್ಷ ಕಾಲ ಅಮಾನತಿನಲ್ಲಿಡಲಾಗಿದೆ. 
ಶೆಹಜೈಬ್ ಒಟ್ಟು  10 ಟಿ20 ಹಾಗೂ 3 ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನದ ಪರವಾಗಿ ಆಟವಾಡಿದ್ದರು.
ಶೆಹಜೈಬ್ ಹಸನ್ ಪಿಎಸ್'ಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ನಿಷೇಧಕ್ಕೆ ಒಳಗಾಗುತ್ತಿರುವ ಐದನೇ ಆಟಗಾರರಾಗಿದ್ದಾರೆ.
ಇದಕ್ಕೂ ಹಿಂದೆ 2010 ರಲ್ಲಿ ಪಾಕಿಸ್ತಾನವು ಇಂಗ್ಲೆಂಡ್ ಪ್ರವಾಸದಲ್ಲಿದ್ದ ವೇಳೆ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಟೆಸ್ಟ್ ತ್ಂಡದ ನಾಯಕ ಸಲ್ಮಾನ್ ಬಟ್, ಮೊಹಮ್ಮದ್ ಆಸಿಫ್ ಮತ್ತು ಮೊಹಮ್ಮದ್ ಅಮೀರ್ ಐದು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದರು. ಅಲ್ಲದೆ ಪಾಕಿಸ್ತಾನದ ಲೆಗ್-ಸ್ಪಿನ್ನರ್ ಡ್ಯಾನಿಷ್ ಕನೆರಿಯಾ 2009ರಲ್ಲಿ ಇಂಗ್ಲೆಂಡಿನ ಕೌಂಟಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದರೆಂದು ಅಜೀವ ನಿಷೇಧಕ್ಕೆ ತುತ್ತಾಗಿದ್ದರು.
SCROLL FOR NEXT