ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಜಸ್ಪ್ರಿತ್ ಬೂಮ್ರಾ ಅವರ ಪ್ರದರ್ಶನ ಅತ್ಯುತ್ತಮವಾಗಿದ್ದು, ಭಾರತಕ್ಕೆ ಇದು ಸಹಕಾರಿಯಾದ ಬೆಳವಣಿಗೆಯಾಗಿದೆ.
ಜಸ್ಪ್ರಿತ್ ಬೂಮ್ರಾ ಅವರ ಪ್ರದರ್ಶನದ ಬಗ್ಗೆ ರಾಷ್ಟ್ರಮಟ್ಟದ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಗುಜರಾತ್ ವೇಗಿಗೆ ಈಗ ಒತ್ತಡದ ನಿರ್ವಹಣೆ ಅತ್ಯಂತ ಪ್ರಮುಖವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಬುಮ್ರಾ ಅವರದ್ದು ಅಪರೂಪದ ಬೌಲಿಂಗ್ ಶೈಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಮುಖ ಟೆಸ್ಟ್ ಸರಣಿಗಳಿಗೆ ಮಾತ್ರ ಆಡಿಸಬೇಕೆಂದು ಎಂಎಸ್ ಕೆ ಪ್ರಸಾದ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ 112.1 ಓವರ್ ಸೇರಿ ಮೂರು ಫಾರ್ಮೆಟ್ ಗಳಲ್ಲಿ 162.1 ಓವರ್ ಗಳನ್ನು ಬೌಲ್ ಮಾಡಿದ್ದ ಬೂಮ್ರಾ ಗುಜರಾತ್ ರಣಜಿ ಟ್ರೋಫಿಯಲ್ಲಿಯೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿರುವ ಹಿನ್ನೆಲೆಯಲ್ಲಿ ಬೂಮ್ರಾ ಅವರಿಗೆ ವರ್ಕ್ ಲೋಡ್ ಮ್ಯಾನೇಜ್ ಮೆಂಟ್ ಅತ್ಯಗತ್ಯವಾಗಿದೆ ಎಂದು ಹೇಳಿದ್ದು ಈ ಮೂಲಕ ಬೂಮ್ರಾ ಅವರನ್ನು ಬುಮ್ರಾ ಅಪರೂಪದ ಬೌಲಿಂಗ್ ಶೈಲಿ; ಪ್ರಮುಖ ಟೆಸ್ಟ್ ಸರಣಿಗಳಿಗೆ ಮಾತ್ರ ಆಡಿಸಲಾಗುವುದೆಂಬ ಸುಳಿವು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.