ಕ್ರಿಕೆಟ್

2003ರ ವಿಶ್ವಕಪ್‌ನಲ್ಲಿ ಧೋನಿ ಇದ್ದಿದ್ದರೆ ಫಲಿತಾಂಶವೇ ಬದಲಾಗಿರುತ್ತಿತ್ತು: ಗಂಗೂಲಿ

Vishwanath S
ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದು ತಮ್ಮ ನಾಯಕತ್ವದ ಕೆಲ ಘಟನೆಗಳನ್ನು ಬಹಿರಂಗಪಡಿಸಿದ್ದಾರೆ. 
ಗಂಗೂಲಿ ಅವರು ತಮ್ಮ ಆತ್ಮಚರಿತ್ರೆ ಎ ಸೆಂಚೂರಿ ಈಸ್ ನಾಟ್ ಎನಫ್ ಪುಸ್ತಕದಲ್ಲಿ 2011ರ ವಿಶ್ವಕಪ್ ವಿಜೇತ ತಂಡದ ನೇತೃತ್ವ ವಹಿಸಿದ್ದ ಮಹೇಂದ್ರ ಸಿಂಗ್ ಧೋನಿ ಕುರಿತಾಗಿಯೂ ಬರೆದಿದ್ದಾರೆ. 
2003ರಲ್ಲಿ ನನ್ನ ನಾಯಕತ್ವದಲ್ಲಿ ಟೀಂ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಫೈನಲ್ ಗೆ ತಲುಪಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು. ಆದರೆ ಈ ವೇಳೆ ತಂಡದಲ್ಲಿ ಎಂಎಸ್ ಧೋನಿ ಇದ್ದಿದ್ದರೆ ಪಂದ್ಯದ ಫಲಿತಾಂಶವೇ ಬದಲಾಗುತ್ತಿತ್ತೇನೋ ಎಂದು ಮಾಜಿ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. 
ಒತ್ತಡದ ಸಮಯದಲ್ಲೂ ಉತ್ತಮ ಪ್ರದರ್ಶನ ನೀಡುವ ಮೂಲಕ ಎಂಎಸ್ ಧೋನಿ ಅವರು ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಚತುರ. ಧೋನಿ ಅವರನ್ನು ನೋಡಿದ ಮೊದಲ ದಿನವೇ ಅವರ ಆಟದ ವೈಖರಿಗೆ ನಾನು ಮನಸೋತೆ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಗಂಗೂಲಿ ಬರೆದುಕೊಂಡಿದ್ದಾರೆ.
SCROLL FOR NEXT