ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 209 ರನ್ ಗಳಿಗೆ ಆಲೌಟ್ ಆಗಿದ್ದು ದಕ್ಷಿಣ ಆಫ್ರಿಕಾ 81 ರನ್ ಗಳ ಮುನ್ನಡೆ ಸಾಧಿಸಿದೆ.
ಕೇಪ್ ಟೌನ್ ನ ನ್ಯೂ ಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 286 ರನ್ ಗಳಿಗೆ ಆಲೌಟ್ ಆಯಿತು. ನಂತರ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ 209 ರನ್‍ಗಳಿಗೆ ಸರ್ವಪತನ ಕಂಡಿದೆ. 81 ರನ್ ಗಳ ಮುನ್ನಡೆ ಸಾಧಿಸಿರುವ ಆಫ್ರಿಕಾ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದೆ.
ಆಫ್ರಿಕಾ ತಂಡದ ವೇಗಿಗಳ ಮಾರಕ ಬೌಲಿಂಗ್ ದಾಳಿಗೆ ಟೀಂ ಇಂಡಿಯಾ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಈ ಮಧ್ಯೆ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ 95 ಎಸೆತಗಳಲ್ಲಿ 93 ರನ್ ಸಿಡಿಸಿ ಅಲ್ಪಮೊತ್ತಕ್ಕೆ ಆಲೌಟ್ ಆಗಬೇಕಿದ್ದ ತಂಡಕ್ಕೆ ಚೇತರಿಕೆ ನೀಡಿದರು.
ಟೀಂ ಇಂಡಿಯಾ ಪರ ಮುರಳಿ ವಿಜಯ್ 1, ಶಿಖರ್ ಧವನ್ 16, ಚೇತೇಶ್ವರ ಪೂಜಾರ 26, ವಿರಾಟ್ ಕೊಹ್ಲಿ 5, ರೋಹಿತ್ ಶರ್ಮಾ 11, ಆರ್ ಅಶ್ವಿನ್ 12, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ 25 ಸಿಡಿಸಿದ್ದಾರೆ.
ಆಫ್ರಿಕಾ ಪರ ಫಿಲೆಂಡರ್ ಮತ್ತು ರಬಡಾ ತಲಾ 3, ಸ್ಟೈನ್ ಮತ್ತು ಮಾರ್ಕೇಲ್ ತಲಾ 2 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics