ಕ್ರೈಸ್ಟ್ಚರ್ಚ್: ಕ್ರೈಸ್ಟ್ಚರ್ಚ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ-ಭಾರತ ನಡುವಿನ ಅಂಡರ್ 19 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ 189 ರನ್ ಗಳ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆರ್ಯನ್ ಜುಯಾಲ್ (86 ರನ್ ) ಹಿಮಾಂಶು ರಾಣಾ (68 ರನ್) ಗಳ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 332 ರನ್ ಗಳಿಸಿತು. ಭಾರತ ನೀಡಿದ ಬೃಹತ್ ಮೊತ್ತದ ರನ್ ನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 143 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಅಖೋನಾ ಮನ್ಯಾ 40 ರನ್ ನೀಡಿ 3 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.