ನವದೆಹಲಿ: ಅಜಿಂಕ್ಯ ರಹಾನೆ ಮತ್ತು ಕೆಎಲ್ ರಾಹುಲ್ ವಿದೇಶಿ ನೆಲದಲ್ಲಿ ಅತ್ಯುತ್ತಮವಾಗಿ ಆಡುತ್ತಾರೆ. ಆದರೆ ಕಳಪೆ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರನ್ನು ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಆಯ್ಕೆ ಮಾಡಿದ್ದು ಎಷ್ಟು ಸರಿ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಪ್ರಶ್ನಿಸಿದ್ದಾರೆ.
ಇತಿಹಾಸ ನೋಡಿದರೆ ವಿದೇಶಿ ನೆಲದಲ್ಲಿ ರೋಹಿತ್ ಶರ್ಮಾ ಮತ್ತು ಧವನ್ ಅವರ ಪ್ರದರ್ಶನ ಅಷ್ಟಕಷ್ಟೆ ಎಂಬುದು ತಿಳಿಯುತ್ತದೆ. ಹೀಗಿದ್ದರು ಅವರನ್ನು ಆಡಿಸಿದ್ದು ಎಷ್ಟು ಸರಿ. ರೋಹಿತ್ ಮತ್ತು ಧವನ್ ಸ್ಥಳದಲ್ಲಿ ಅಜಿಂಕ್ಯ ಮತ್ತು ರಾಹುಲ್ ರನ್ನು ಆಡಿಸಬೇಕಾಗಿತ್ತು. ಆದರೆ ರೋಹಿತ್, ಧವನ್ ಆಯ್ಕೆ ಯಾಕೆ ನಡೆಯಿತು ಎಂಬುದು ತನಗೆ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
ಕೇಪ್ ಟೌನ್ ನಲ್ಲಿ ನಡೆದ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತ್ತಿದ್ದು ತನಗೆ ಅಚ್ಚರಿ ತಂದಿಲ್ಲ ಎಂದು ಹೇಳಿರುವ ಸೌರವ್ ಗಂಗೂಲಿ, ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮುರಳಿ ವಿಜಯ್ ವಿದೇಶಿ ನೆಲದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics