ನವದೆಹಲಿ: ಟಿ20 ಇತಿಹಾಸದಲ್ಲೇ ರಿಷಭ್ ಪಂತ್ ಎರಡನೇ ಅತಿ ವೇಗದ ಶತಕ ಸಿಡಿಸಿದ್ದು ಟಿ20ನಲ್ಲಿ ಭಾರತ ಪರ ಅತಿ ವೇಗದ ಶತಕ ಬಾರಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಉತ್ತರ ವಲಯ ಟಿ20 ಟೂರ್ನಿಯಲ್ಲಿ ದೆಹಲಿ ಪರ ರಿಷಭ್ ಪಂತ್ 32 ಎಸೆತಗಳಲ್ಲಿ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಹಿಮಾಚಲ ಪ್ರದೇಶ ದೆಹಲಿ ತಂಡಕ್ಕೆ 145 ರನ್ ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ದೆಹಲಿ ಪರ ರಿಷಭ್ ಪಂತ್ 38 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ 12 ಸಿಕ್ಸರ್ ಗಳ ನೆರವಿನಿಂದ 116 ರನ್ ಗಳಿಸಿ ಅಜೇಯರಾಗಿ ಉಳಿದರು.
ಟಿ20ನಲ್ಲಿ ಅತಿ ವೇಗದ ಶತಕ ವೆಸ್ಟ್ ಇಂಡೀಸ್ ಕ್ರಿಸ್ ಗೇಲ್ ಹೆಸರಲ್ಲಿದೆ. 2013ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿದ್ದರು.