ದಕ್ಷಿಣ ಆಫ್ರಿಕಾ ಆಟಗಾರರು 
ಕ್ರಿಕೆಟ್

ಸೆಂಚುರಿಯನ್ ನಲ್ಲಿ ವಿಶ್ವದ ನಂ.1 ತಂಡಕ್ಕೆ ಮುಖಭಂಗ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಸೋಲು

ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 135 ರನ್‌ಗಳ ಹೀನಾಯ....

ಸೆಂಚುರಿಯನ್: ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 135 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇನ್ನು ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 0-2ರ ಅಂತರದಲ್ಲಿ ಸರಣಿ ಸೋತು ಮುಖಭಂಗಕ್ಕೊಳಗಾಗಿದೆ.
ದಕ್ಷಿಣ ಆಫ್ರಿಕಾ ನೀಡಿದ್ದ 287 ರನ್ ಬೆನ್ನತ್ತಿದ ಭಾರತೀಯ ತಂಡ ಯಾವುದೇ ಕಠಿಣ ಹೋರಾಟ ನಡೆಸದೆ 50.2 ಓವರ್‌ಗಳಲ್ಲಿ 151 ರನ್‌ಗಳಿಗೆ ಸರ್ವಪತನವನ್ನು ಕಂಡಿತ್ತು.

ಮೊದಲ ಇನ್ನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾ 335, ಭಾರತ 307 ರನ್ ಗಳಿಸಿದ್ದರೆ 2ನೇ ಇನ್ನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾ 258, ಭಾರತ 151 ರನ್ ಗಳಿಸಿ ಸೋಲೊಪ್ಪಿಕೊಂಡಿದೆ.​​

ಭಾರತದ ಪರ ಮುರಳಿ ವಿಜಯ್ 9, ಕೆ ಎಲ್ ರಾಹುಲ್ 4, ವಿರಾಟ್ ಕೊಹ್ಲಿ 5, ಚೇತೇಶ್ವರ ಪೂಜಾರ 19, ಪಾರ್ಥಿವ್ ಪಟೇಲ್ 19, ರೋಹಿತ್ ಶರ್ಮಾ 47, ಹಾರ್ದಿಕ್ ಪಾಂಡ್ಯ 6, ರವಿಚಂದ್ರನ್ ಅಶ್ವಿನ್‌ 3, ಮೊಹಮ್ಮದ್ ಶಮಿ 28, ಜಸ್ಪ್ರೀತ್​ ಬುಮ್ರಾ 2 ಮತ್ತು ಇಶಾಂತ್‌ ಶರ್ಮಾ 4 ರನ್​ ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪರ ಎನ್ಜಿಡಿ 6, ಕಗಿಸೋ ರಬಡಾಗೆ 3 ವಿಕೆಟ್​ ಕಬಳಿಸಿದ್ದಾರೆ.
ಕೇಪ್ ಟೌನ್‌ನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ 72 ರನ್ ಅಂತರದಿಂದ ಸೋಲು ಅನುಭವಿಸಿದ್ದ ಟೀಂ ಇಂಡಿಯಾ ಸೆಂಚುರಿಯನ್‌ನಲ್ಲಿ 135 ರನ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಇದರೊಂದಿಗೆ ಸರಣಿ ಕ್ಲೀನ್ ಸ್ವೀಪ್ ಭೀತಿ ಎದುರಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!