ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

1 ಓವರ್‌ನಲ್ಲಿ 37 ರನ್ ಸಿಡಿಸಿ ವಿಶ್ವ ದಾಖಲೆ ಬರೆದ ಜೆಪಿ ಡುಮಿನಿ

ದಕ್ಷಿಣ ಆಫ್ರಿಕಾ ಆಟಗಾರ ಜೆಪಿ ಡುಮಿನಿ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವೊಂದರಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ...

ಜೆಪಿ ಡುಮಿನಿ
Vishwanath S
Updated On : 20 Jan 2018, 10:49 am
ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಆಟಗಾರ ಜೆಪಿ ಡುಮಿನಿ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವೊಂದರಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 
ಕೇಪ್ ಕೋಬ್ರಾಸ್ ತಂಡದ ಪರ ಆಡುತ್ತಿರುವ ಡುಮಿನಿ ಕೇವಲ 6 ಎಸೆತಕ್ಕೆ 37 ರನ್ ಸಿಡಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವೊಂದರ ಓವರ್ ಒಂದರಲ್ಲಿ ದಾಖಲಾದ 2ನೇ ಗರಿಷ್ಠ ರನ್ ಇದಾಗಿದೆ. 
ನೈಟ್ಸ್ ತಂಡದ ಸ್ಪಿನ್ನರ್ ಎಡ್ಡಿ ಲೆಯ್ ಓವರ್ ನಲ್ಲಿ ಮೊದಲ 4 ಎಸೆತಗಳನ್ನು ಸಿಕ್ಸರ್ ಗೆ ಅಟ್ಟಿದರು. 5ನೇ ಎಸೆತದಲ್ಲಿ  2 ರನ್ ಪಡೆದರು. ನಂತರ 6ನೇ ಎಸೆತ ನೋಬಾಲ್ ಆಗಿದ್ದು ಆ ಎಸೆತವನ್ನು ಬೌಂಡರಿ ಸಿಡಿಸಿದರು. ಇದರಿಂದ ಒಟ್ಟಾರೆ 5 ರನ್ ಬಂತು. 6ನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದರು. ಒಟ್ಟಾರೆ 6 ಎಸೆತಗಳಲ್ಲಿ 37 ರನ್ ಸಿಡಿಸಿದರು. 

Advertisement

Advertisement

ಈ ಹಿಂದೆ ಬಾಂಗ್ಲಾ ಪ್ರೀಮಿಯರ್ ಲೀಗ್ ನಲ್ಲಿ ಬಾಂಗ್ಲಾದ ಅಲ್ಲಾವುದ್ದೀನ್ ಎಸೆದ ಓವರ್ ನಲ್ಲಿ ಜಿಂಬಾಬ್ವೆಯ ಎಲ್ಟನ್ ಚಿಗುಂಬರ 39 ರನ್ ಸಿಡಿಸಿದ್ದರು. ಇದು ವಿಶ್ವ ದಾಖಲೆಯಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement