ಜೋಹಾನ್ಸ್ ಬರ್ಗ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಿಆರ್‌ಎಸ್ ತೆಗೆದುಕೊಳ್ಳುವಲ್ಲಿ ಎಡವಿದ ಪರಿಣಾಮ ಎಬಿ ಡಿ ವಿಲಿಯರ್ಸ್ ಗೆ ಜೀವದಾನ ಸಿಕ್ಕಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ 81 ರನ್ ಗಳಿಸಿದ್ದಾಗ ಎಬಿಡಿ ವಿಲಿಯರ್ಸ್ ಅವರನ್ನು ವೇಗಿ ಇಶಾಂತ್ ಶರ್ಮಾ ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದ್ದರು. ಆದರೆ ಫೀಲ್ಡ್ ಅಂಪೈರ್ ನಾಟೌಟ್ ಎಂದು ಘೋಷಿಸಿದ್ದರು. ಈ ವೇಳೆ ಡಿಆರ್ಎಸ್ ಮೊರೆ ಹೋಗುವ ಅವಕಾಶವಿದ್ದರೂ ನಾಯಕ ವಿರಾಟ್ ಕೊಹ್ಲಿ ಆಸಕ್ತಿ ತೋರಲಿಲ್ಲ. ಅದೇ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದ್ದರೆ ಮಾತ್ರ ಅವರು ಡಿಆರ್ಎಸ್ ತೆಗೆದುಕೊಳ್ಳದೆ ಬಿಡುತ್ತಿರಲಿಲ್ಲ.
ಡಿಆರ್ಎಸ್ ನಲ್ಲಿ ಎಂಎಸ್ ಧೋನಿ ಓರ್ವ ಚಾಣಾಕ್ಷ ಆಟಗಾರನಾಗಿದ್ದರು. ಧೋನಿ ಡಿಆರ್ಎಸ್ ನಲ್ಲಿ ಎಡವಿದ ಸಂದರ್ಭಗಳು ಕಡಿಮೆ. ಹೀಗಾಗಿ ಅವರಿಗೆ ಧೋನಿ ಪರಾಮರ್ಶೆ ವ್ಯವಸ್ಥೆ(ಡಿಆರ್ಎಸ್) ಎಂದು ಕರೆಯುವ ವಾಡಿಕೆಯಿದೆ.