ಹೈದರಾಬಾದ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಟೆಸ್ಟ್ ಸರಣಿ ಸೋತ್ತಿದ್ದ ಟೀಂ ಇಂಡಿಯಾ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ಪಂದ್ಯ ಗೆಲುವಿನ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾವನಾತ್ಮಕ ಟ್ವೀಟ್ ಮಾಡಿದ್ದು ಈ ಟ್ವೀಟ್ ಗೆ ನೆಟಿಜೆನ್ ಗಳು ಮನಸೋತ್ತಿದ್ದಾರೆ.
ಕೊಹ್ಲಿ ಟ್ವೀಟ್ ಮಾಡಿದ್ದು ಈ ದಿನ ನನಗೆ ವಿಶೇಷವಾಗಿದೆ. ಗೆಲುವಿಗಾಗಿ ಶ್ರಮವಹಿಸಿದ ತಂಡದ ಎಲ್ಲ ಸದಸ್ಯರಿಗೂ ಧನ್ಯವಾದ. ಜೈ ಹಿಂದ್..ಎಂದು ಟೀಂ ಇಂಡಿಯಾದ ಎಲ್ಲ ಸದಸ್ಯರಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಟ್ವೀಟ್ ಮಾಡಿರುವ ಫೋಟೋ ಸಖತ್ ವೈರಲ್ ಆಗಿದೆ. ಕೊಹ್ಲಿ ಟ್ವೀಟ್ ಗೆ ನೆಟಿಜೆನ್ಸ್ ಮನಸೋತು ರೀಟ್ವೀಟ್ ಮಾಡಿದ್ದಾರೆ.