ದುಬೈ: ಯುನೈಟೆಡ್ ಅರಬ್ ಎಮಿರೆಟ್ಸ್ ಅಜ್ಮಲ್ ಆಲ್ ಸ್ಟಾರ್ಸ್ ಲೀಗ್ ಕ್ರಿಕೆಟ್ ಟಿ20 ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದೆ.
ಕಳೆದ ಜನವರಿ 24ರಂದು ದುಬೈ ಸ್ಟಾರ್ಸ್ ಮತ್ತು ಶಾರ್ಜಾ ವಾರಿಯರ್ಸ್ ನಡುವೆ ಟಿ20 ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ದುಬೈ ಸ್ಟಾರ್ಸ್ ನಿಗದಿತ ಓವರ್ ನಲ್ಲಿ 135 ರನ್ ಪೇರಿಸಿದ್ದರು. 136 ರನ್ ಗಳ ಗುರಿ ಪಡೆದ ಶಾರ್ಜಾ ವಾರಿಯರ್ಸ್ 46 ರನ್ ಗಳಿಗೆ ಆಲೌಟ್ ಆಗಿ ಪಂದ್ಯದಲ್ಲಿ ಹೀನಾಯ ಸೋಲು ಕಂಡಿತ್ತು.
ತಂಡ ಕಡಿಮೆ ರನ್ ಗಳಿಗೆ ಆಲೌಟ್ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಆದರೆ ಈ ಪಂದ್ಯದಲ್ಲಿ ಶಾರ್ಜಾ ವಾರಿಯರ್ಸ್ ನ 5 ಮಂದಿ ರನೌಟ್ ಆಗಿದ್ದರು. ಇನ್ನು ಮೂರು ಮಂದಿ ಸ್ಟಂಪ್ ಔಟ್ ಆಗಿದ್ದರು. ಕ್ರಿಕೆಟ್ ಗೊತ್ತಿಲ್ಲದವರಂತೆ ಓಡಿ ಸಿಲ್ಲಿ ಸಿಲ್ಲಿಯಾಗಿ ರನೌಟ್ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನು ಗಮನಿಸಿದ ಯುಎಇ ಕ್ರಿಕೆಟ್ ಬೋರ್ಡ್ ಈ ಟೂರ್ನಿಯನ್ನೇ ಸ್ಧಗಿತಗೊಳಿಸಿದೆ. ಐಸಿಸಿ ಭ್ರಷ್ಟಾಚಾರದ ನಿಗ್ರಹ ದಳ ಈಗ ಈ ಪಂದ್ಯದಲ್ಲಿ ಭಾಗವಹಿಸಿದ್ದ ಆಟಗಾರರನ್ನು ತನಿಖೆ ನಡೆಸಲು ಮುಂದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics