ಆರೋನ್ ಫಿಂಚ್ 
ಕ್ರಿಕೆಟ್

ಟಿ-20 ಕ್ರಿಕೆಟ್: ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾದ ಫಿಂಚ್ ಹೊಸ ವಿಶ್ವದಾಖಲೆ; 76 ಬಾಲ್ ಗಳಲ್ಲಿ 172 ರನ್!

ಆಸ್ಟ್ರೇಲಿಯಾದ ಅಗ್ರ ಶ್ರೇಯಾಂಕದ ಬ್ಯಾಟ್ಸ್ ಮನ್ ಆರೋನ್ ಫಿಂಚ್ ಟಿ-20 ಕ್ರಿಕೆಟ್ ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಹರಾರೆ (ಜಿಂಬಾಂಬ್ವೆ): ಆಸ್ಟ್ರೇಲಿಯಾದ ಅಗ್ರ ಶ್ರೇಯಾಂಕದ ಬ್ಯಾಟ್ಸ್ ಮನ್ ಆರೋನ್ ಫಿಂಚ್ ಟಿ-20  ಕ್ರಿಕೆಟ್ ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ  ಹರಾರೆ ಸ್ಪೋರ್ಟ್ಸ್ ಕ್ಲಬ್ ತ್ರಿಕೋಣ ಸರಣಿಯಲ್ಲಿ 76 ಬಾಲ್ ಗಳಲ್ಲಿ 172 ರನ್ ಗಳಿಸುವುದರೊಡನೆ ಫಿಂಚ್ ದಾಖಲೆ ಬರೆದಿದ್ದಾರೆ.
31 ರ ಹರೆಯದ ಫಿಂಚ್ 6 ಬೌಂಡರಿ ಮತ್ತು 10 ಸಿಕ್ಸರ್ ಗಳೊಡನೆ 226.31 ಸ್ಟ್ರೈಕ್ ರೇಟ್ ಗಳಲ್ಲಿ ಈ ಅದ್ಭುತ ಸಾಧನೆ ಮಾಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರರಾಗಿ ಕ್ರೀಸ್ ಗಿಳಿದ ಫಿಂಚ್ ರೋಚಕ ಆಟ ಎದುರಾಳಿಗಳನ್ನು ದಂಗುಬಡಿಸಿತ್ತು. ಪಂದ್ಯದಲ್ಲಿ ಆಸ್ಟ್ರೇಲಿಯಾ 229/2 ರನ್ ಗಳಿಸಿದೆ.
2013ರಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಸರಣಿಯಲ್ಲಿ ಪುಣೆ ವಾರಿಯರ್ಸ್ ವಿರುದ್ಧ  ಕ್ರಿಸ್ ಗೇಲ್ 175 ರನ್ ಗಳಿಸಿ ಐಪಿಎಲ್ ಕ್ರಿಕೆಟ್ ದಾಖಲೆ ನಿರ್ಮಾಣ ಮಾಡಿದ್ದರು. ಇದೀಗ ಫಿಂಚ್  ಅಂತಾರಾಷ್ಟ್ರೀಯ ಟಿ-20  ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿಅವರಾಗಿ ಗುರುತಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NCP ಬಣಗಳ ವಿಲೀನದ ಸುಳಿವು: INDIA ಗೆ ಕೈ ಕೊಟ್ಟು NDA ಸೇರ್ತಾರಾ ಶರದ್ ಪವಾರ್, ಸುಪ್ರಿಯಾ?

ತೇಜೋವಧೆಗೆ ಹುನ್ನಾರ: 'ಸತ್ಯಾಸತ್ಯತೆ' ಹೊರಬರಬೇಕಿದೆ; HD ಕುಮಾರಸ್ವಾಮಿ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ತಿರುಗೇಟು, Video

ಪಟಾಕಿಗಳು ಕಾಯಿಲೆಗಳನ್ನು ಗುಣಪಡಿಸುತ್ತೆ ಎಂದ ಬಂಗಾಳ ಬಿಜೆಪಿ ಶಾಸಕಿ; ವಿವಾದ ಸೃಷ್ಟಿ!

'ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಆರ್ಥಿಕ ನೆರವು ಕೊಡಬೇಡಿ': ಟ್ರಂಪ್‌ಗೆ ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಸಲಹೆ!

ಸಿಎಂ ಶಿವಕುಮಾರ್ ಹಾಸನಾಂಬೆ ದರ್ಶನ ಪಡೆಯುತ್ತಿರುವ ವಿಡಿಯೋಗೆ ಆಕ್ರೋಶಿತ ಭಕ್ತರಿಂದ ಚಪ್ಪಲಿ ಎಸೆತ, Video!