ಕ್ರಿಕೆಟ್

ಕುಲದೀಪ್ ಯಾದವ್ ಮಾರಕ ದಾಳಿಯಿಂದ ಇಂಗ್ಲೆಂಡ್ ತಂಡವನ್ನು 159ಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿ

Nagaraja AB

ಮ್ಯಾಂಚೆಸ್ಟರ್ : ಕುಲದೀಪ್ ಯಾದವ್ ಮ್ಯಾಜಿಕಲ್ ಸ್ಪೀನ್ ಮೂಲಕ ಇಲ್ಲಿ ಆರಂಭವಾದ ಮೊದಲ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಯಿತು.

ನಾಯಕ ವಿರಾಟ್ ಕೊಹ್ಲಿ ಅವರ ಬೌಲಿಂಗ್  ನಿರ್ಧಾರವನ್ನು ದೃಢಪಡಿಸಿದ ಕುಲದೀಪ್ ಯಾದವ್ , ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟಿಂಗ್ ಬಲವನ್ನು ಕುಂದಿಸಿದರು. ವೃತ್ತಿಜೀವನದಲ್ಲಿ ನಾಲ್ಕು ಓವರ್ ಗಳಲ್ಲಿ 24 ರನ್ ಗಳಿಗೆ ಐದು ವಿಕೆಟ್ ಪಡೆಯುವ ಮೂಲಕ  ಭಾರತದ ಗೆಲುವಿಗೆ ಕಾರಣರಾದರು.

ಮೊದಲ ಐದು ಓವರ್ ಗಳ ಪವರ್ ಪ್ಲೇ ಹಂತದಲ್ಲಿ ಇಂಗ್ಲೆಂಡಿನ ಆರಂಭಿಕ ಆಟಗಾರರಾದ ಜಾಸ್ ಬಟ್ವರ್ 69  ಹಾಗೂ ಜಾಸನ್ ರಾಯ್ 30  ಉತ್ತಮ ಜೊತೆಯಾಟದಿಂದ 12 ಓವರ್ ಆಗುವಷ್ಟರಲ್ಲಿ 1 ವಿಕೆಟ್ ನಷ್ಟಕ್ಕೆ 95 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಉತ್ತಮ ಹಂತದಲ್ಲಿತ್ತು.

 ಆದರೆ, 14 ನೇ ಓವರ್ ನಲ್ಲಿ  ನಾಯಕ ಇಯಾನ್ ಮೊರ್ಗಾನ್ (7)  ಹಾಗೂ  ಜಾನಿ ಬೈರ್ ಸ್ಟಾ ,ಜೊ ರೂಟ್  ಅವರನ್ನು ಡೆಕ್  ಜೌಟ್ ಮಾಡಿದ ಕುಲದೀಪ್ ಯಾದವ್, ಇಂಗ್ಲೆಂಡ್ ತಂಡಕ್ಕೆ ಭಾರೀ  ಆಘಾತ ನೀಡಿದರು.

ಕುಲದೀಪ್ ಪ್ರಯತ್ನದ ಹೊರತಾಗಿಯೂ ಎಡ ಗೈ ಸ್ಪೀನ್ನರ್  ಯಜ್ವೇಂದ್ರ ಚಾಹಲ್ ನಾಲ್ಕು ಓವರ್ ಗಳಲ್ಲಿ  ಯಾವುದೇ ವಿಕೆಟ್ ಪಡೆಯದೆ 34 ರನ್ ಹಾಗೂ ಭುವನೇಶ್ವರ್ ಕುಮಾರ್  ನಾಲ್ಕು  ಓವರ್ ಗಳಲ್ಲಿ  ಯಾವುದೇ ವಿಕೆಟ್ ಪಡೆಯದೆ 44 ರನ್ ನೀಡುವ ಮೂಲಕ ಭಾರೀ ಬೆಲೆ ತತ್ತರು.ಆದರೆ ಉಮೇಶ್ ಯಾದವ್ 21 ರನ್ ನೀಡಿ 2 ವಿಕೆಟ್ ಪಡೆದುಕೊಂಡರು.

ಕುಲದೀಪ್ ಯಾದವ್ ಅವರ ಪರಿಣಾಮಕಾರಿ ಬೌಲಿಂಗ್ ನಿಂದಾಗಿ 1 ವಿಕೆಟ್ ನಷ್ಟಕ್ಕೆ 95 ರನ್ ನಲ್ಲಿದ್ದ ಇಂಗ್ಲೆಂಡ್ ತಂಡ 107 ರನ್ ಗಳಿಸುವಷ್ಟರಲ್ಲಿ  ಪ್ರಮುಖ 5 ವಿಕೆಟ್  ಕಳೆದುಕೊಂಡಿತ್ತು.  ಆದರೆ ಅಂತ್ಯಭಾಗದಲ್ಲಿ ಡೆವಿಡ್ ವಿಲ್ಲಿ 15 ಎಸೆತಗಳಲ್ಲಿ 28 ರನ್ ಗಳಿಸುವ ಮೂಲಕ  ಇಂಗ್ಲೆಂಡ್ 150 ರ ಗಡಿ ದಾಟಲು ಸಾಧ್ಯವಾಯಿತು.

SCROLL FOR NEXT