ಕ್ರಿಕೆಟ್

'ವಿರಾಟ್ ಕೊಹ್ಲಿ ಅಲ್ಲ': ಪಾಕ್ ವೇಗಿ ಆಮಿರ್ ಪ್ರಕಾರ ವಿಶ್ವದ ಕಠಿಣ ಬ್ಯಾಟ್ಸಮನ್ ಯಾರು ಗೊತ್ತಾ?

Srinivasamurthy VN
ಕರಾಚಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪ್ರಶಂಸೆಗೆ ಪಾತ್ರವಾಗಿದ್ದ ಪಾಕಿಸ್ತಾನದ ವೇಗಿ ಮಹಮದ್ ಆಮೀರ್ ಪ್ರಕಾರ ವಿಶ್ವ ಕ್ರಿಕೆಟ್ ನಲ್ಲಿ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಅತ್ಯಂತ ಕಠಿಣ ಬ್ಯಾಟ್ಸಮನ್ ಅಲ್ಲ.. ಹಾಗಾದರೇ ಅವರ ಪ್ರಕಾರ ಕಠಿಣ ಬ್ಯಾಟ್ಸಮನ್ ಯಾರು ಗೊತ್ತಾ?
ಈ ಹಿಂದೆ ಪಾಕಿಸ್ತಾನ ವಿರುದ್ದದ ಪಂದ್ಯದ ಬಳಿಕ ಮಾತನಾಡಿದ್ದ ವಿರಾಟ್ ಕೊಹ್ಲಿ ಮಹಮದ್ ಆಮಿರ್ ರನ್ನು ತಾನು ಕಂಡ ವಿಶ್ವದ ಕಠಿಣ ಬೌಲರ್ ಗಳಲ್ಲಿ ಒಬ್ಬ ಎಂದು ಶ್ಲಾಘಿಸಿದ್ದರು. ಅಲ್ಲದೆ ತರಬೇತಿ ವೇಳೆ ಆಮಿರ್ ಗೆ ತಮ್ಮ ಬ್ಯಾಟ್ ನೀಡಿ ಪ್ರೋತ್ಸಾಹ ನೀಡಿದ್ದರು. ಆ ಬಳಿಕ ಮಹಮದ್ ಆಮಿರ್ ಕೂಡ ಕೊಹ್ಲಿ ಅವರನ್ನು ಶ್ಲಾಘಿಸಿ ವಿಶ್ವ ಕ್ರಿಕೆಟ್ ನ ಅತ್ಯುತ್ತಮ ಕ್ರಿಕೆಟಿಗ ಎಂದು ಹೇಳಿದ್ದರು.
ಇದೀಗ ಇದೇ ಆಮಿರ್ ವಿಶ್ವದ ಕಠಿಣ ಬ್ಯಾಟ್ಸಮನ್ ಗಳ ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ. ಹಾಗಾದರೆ ಅಮಿರ್ ಪ್ರಕಾರ ವಿಶ್ವದ ಕಠಿಣ ಬ್ಯಾಟ್ಸಮನ್ ಯಾರು ಎಂಬ ಪ್ರಶ್ನೆಗೆ ಉತ್ತರ. ಆಸ್ಟ್ರೇಲಿಯಾ ತಂಡ ಮಾಜಿ ನಾಯಕ ಸ್ಟೀವನೆ ಸ್ಮಿತ್. ಹೌದು ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿ ಪ್ರಸ್ತುತ ನಿಷೇಧದ ಶಿಕ್ಷೆ ಅನುಭವಿಸುತ್ತಿರುವ ಸ್ಟೀವನ್ ಸ್ಮಿತ್ ವಿಶ್ವದ ಅತ್ಯಂತ ಕಠಿಣ ಬ್ಯಾಟ್ಸಮನ್ ಎಂದು ಮಹಮದ್ ಆಮಿರ್ ಹೇಳಿಕೊಂಡಿದ್ದಾರೆ.
ಖ್ಯಾತ ಕ್ರೀಡಾ ವಾಹಿನಿ ಇಎಸ್ ಪಿಎನ್ ಕ್ರಿಕ್ ಇನ್ಫೋಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಹಮದ್ ಆಮಿರ್, ನಾನು ಕಂಡ ಅತ್ಯಂತ ಕಠಿಣ ಬ್ಯಾಟ್ಸಮನ್ ಗಳಲ್ಲಿ ಸ್ಟೀವನ್ ಸ್ಮಿತ್ ಒಬ್ಬರು. ಅವರ ವಿಶೇಷ ಬ್ಯಾಟಿಂಗ್ ಶೈಲಿ ಯಾವುದೇ ಬೌಲರ್ ಕೂಡ ಅವರ ವಿಕೆಟ್ ಪಡೆಯಲು ಪರದಾಡುವಂತೆ ಮಾಡುತ್ತಾರೆ. ವಿಶ್ವದ ಕಠಿಣ ಬ್ಯಾಟ್ಸಮನ್ ಗಳಲ್ಲಿ ಸ್ಮಿತ್ ಒಬ್ಬರು ಎಂದು ಆಮಿರ್ ಹೇಳಿದ್ದಾರೆ.
SCROLL FOR NEXT