ಕ್ರಿಕೆಟ್

ಇಂಗ್ಲೆಂಡ್ ಸರಣಿ: ಟೆಸ್ಟ್ ಗೆ ಮೊಹಮ್ಮದ್ ಶಮಿ, ರಿಷಭ್ ಪಂತ್ ಆಯ್ಕೆ ಸಾಧ್ಯತೆ

Srinivas Rao BV
ಚೆನ್ನೈ: ವೇಗಿ ಜಸ್ಪ್ರಿತ್ ಬುಮ್ರಾ  ಆ.1 ರಂದು ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಗೆ ಅಲಭ್ಯವಾಗುವ ಸಾಧ್ಯತೆ ಇದ್ದು, ಮೊಹಮ್ಮದ್ ಶಮಿಗೆ ಅವಕಾಶ ಸಿಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಅಫ್ಘಾನಿಸ್ತಾನ ತಂಡದ ವಿರುದ್ಧದ ಪಂದ್ಯದಲ್ಲಿ ಫಿಟ್ನೆಸ್ ಕಾರಣದಿಂದಾಗಿ ಮೊಹಮ್ಮದ್ ಶಮಿ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಈಗ ಫಿಟ್ನೆಸ್ ಟೆಸ್ಟ್ ನ್ನು ಮೊಹಮ್ಮದ್ ಶಮಿ ಸಂಪೂರ್ಣಗೊಳಿಸಿದ್ದು, ಬುಧವಾರ ಅಥವಾ ಗುರುವಾರ ಘೋಷಣೆಯಾಗುವ ತಂಡದ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬುಮ್ರಾ ಅವರನ್ನು ತಂಡದ ಪಟ್ಟಿಯಲ್ಲಿ ಘೋಷಣೆ ಮಾಡಲಾಗುತ್ತದೆಯಾದರೂ, ಇನ್ನೂ ಎರಡು ಟೆಸ್ಟ್ ಗಳಿಗೆ ಅಲಭ್ಯವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆದರೆ ಇದಕ್ಕೂ ಮುನ್ನ ಬುಮ್ರಾ ಅವರು ಫಿಟ್ನೆಸ್ ಟೆಸ್ಟ್ ನ್ನುತೆಗೆದುಕೊಳ್ಳಬೇಕಿದೆ. 
ಇನ್ನು ಕೀಪರ್ ವೃದ್ಧಿಮಾನ್ ಸಹಾ ಸಹ ಗಾಯದಿಂದ ಬಳಲುತ್ತಿದ್ದು, ತಂಡದ ಭಾಗವಾಗುವ ಸಾಧ್ಯತೆ ಕಡಿಮೆ ಇದೆ, ನಂತರದ ಸಾಧ್ಯತೆಗಳು ದಿನೇಶ್ ಕಾರ್ತಿಕ್ ಅವರಿಗೆ ಎನ್ನಲಾಗುತ್ತಿದೆ. ಆದರೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ರಿಷಭ್ ಪಂತ್ ಪ್ರಥಮ ಬಾರಿಗೆ ಟೆಸ್ಟ್ ಆಡಲಿದ್ದಾರೆ ಎಂದು ತಿಳಿದುಬಂದಿದೆ.
SCROLL FOR NEXT