ಸಂಗ್ರಹ ಚಿತ್ರ 
ಕ್ರಿಕೆಟ್

ಧೋನಿಯ ಆಮೆಗತಿ ಆಟ ನನ್ನ ಕು'ಖ್ಯಾತಿ'ಗೆ ಕಾರಣವಾಗಿದ್ದ ಆಟವನ್ನು ನೆನಪಿಸಿತು: ಸುನಿಲ್ ಗವಾಸ್ಕರ್

ಎಂಎಸ್ ಧೋನಿ ಅವರ ನಿಧಾನಗತಿ ಬ್ಯಾಟಿಂಗ್ ಕುರಿತಂತೆ ಟೀಕಾ ಪ್ರಹಾರಗಳು ಮುಂದುವರೆದಿರುವಂತೆಯೇ ಅವರ ಬೆನ್ನಿಗೆ ನಿಲ್ಲುವವರ ಸಂಖ್ಯೆ ಕೂಡ ಹೆಚ್ಚಿದೆ. ಈ ಪಟ್ಟಿಗೆ ಇದೀಗ ಹೊಸದಾಗಿ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸೇರ್ಪಡೆಯಾಗಿದ್ದಾರೆ.

ನವದೆಹಲಿ: ಇಂಗ್ಲೆಂಡ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಬೃಹತ್ ಗುರಿಯ ಹೊರತಾಗಿಯೂ ಎಂಎಸ್ ಧೋನಿ ಅವರ ನಿಧಾನಗತಿ ಬ್ಯಾಟಿಂಗ್ ಕುರಿತಂತೆ ಟೀಕಾ ಪ್ರಹಾರಗಳು ಮುಂದುವರೆದಿರುವಂತೆಯೇ ಅವರ ಬೆನ್ನಿಗೆ ನಿಲ್ಲುವವರ ಸಂಖ್ಯೆ ಕೂಡ ಹೆಚ್ಚಿದೆ. ಈ ಪಟ್ಟಿಗೆ ಇದೀಗ ಹೊಸದಾಗಿ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸೇರ್ಪಡೆಯಾಗಿದ್ದಾರೆ.
ಧೈನಿಕವೊಂದಕ್ಕೆ ಅಂಕಣ ಬರೆದಿರುವ ಸುನಿಲ್ ಗಾವಸ್ಕರ್, ಎರಡನೇ ಏಕದಿನ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಉಲ್ಲೇಖಿಸಿ ಬರೆದಿದ್ದಾರೆ. 'ಅಗ್ರ ಕ್ರಮಾಂಕದ ಬ್ಯಾಟ್ಸ್‌ ಮನ್‌ ಗಳು ವಿಫಲರಾದ ಸಂದರ್ಭದಲ್ಲಿ ಧೋನಿ ಮುಂದೆ ಹೆಚ್ಚಿನ ಆಯ್ಕೆಗಳಿಲ್ಲದ ಕಾರಣ, ಅವರು ಏನೂ ಮಾಡಲು ಆಗಲಿಲ್ಲ ಎಂದು ಹೇಳಿದ್ದಾರೆ. 
ಅಂತೆಯೇ ಜವಾಬ್ದಾರಿ ಮರೆತು ಆಡಿದ ಬ್ಯಾಟ್ಸಮನ್ ಗಳ ಕುರಿತು ಟೀಕಿಸಿರುವ ಗವಾಸ್ಕರ್, 'ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ರೋಹಿತ್‌ ಶರ್ಮಾ ಬೇಜವಾಬ್ದಾರಿ ಹೊಡೆತಕ್ಕೆ ಬಲಿಯಾದರೆ, ಉತ್ತಮವಾಗಿ ಆಡುತ್ತಿದ್ದ ಧವನ್‌ ಕೆಟ್ಟ ರೀತಿಯಲ್ಲಿ ನಿರ್ಗಮಿಸಿದರು. ಇನ್ನು ಹೊರಹೋಗುತ್ತಿದ್ದ ಚೆಂಡನ್ನು ಕೆಣಕಿದ ರಾಹುಲ್‌ ತಮ್ಮ ಆಟದಲ್ಲಿ ಇನ್ನಷ್ಟು ಸುಧಾರಣೆ ತಂದುಕೊಳ್ಳಬೇಕಿದೆ. ಅವರು ಹಿಂದಿನ ಪಂದ್ಯದಲ್ಲಿ ಶತಕ ಬಾರಿಸಿರಬಹುದು, ಆದರೆ ಪ್ರತಿ ಹೊಸ ಇನಿಂಗ್ಸ್‌ ಕೂಡ ಶೂನ್ಯದಿಂದಲೇ ಆರಂಭವಾಗುವುದು. ಸಾಕಷ್ಟು ಅನುಭವಿಯಾದ ರೈನಾ ಇಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ಆಡಲಿಲ್ಲ' ಎಂದು ಹೇಳಿದ್ದಾರೆ.
ಅಂತೆಯೇ ಧೋನಿ ಆಟವನ್ನು ಸಮರ್ಥಿಸಿಕೊಂಡ ಅವರು, 'ಈ ಸಂದರ್ಭ ಧೋನಿಯ ಪರದಾಟ ಅರ್ಥವಾಗುವಂಥದ್ದೇ. ಅಸಾಧ್ಯ ಎನ್ನುವಂಥ ಪರಿಸ್ಥಿತಿಯಲ್ಲಿ ಸಿಲುಕಿದ ಧೋನಿ ಮುಂದೆ ಸೀಮಿತ ಅವಕಾಶಗಳಿದ್ದವು. ಈ ಸಂದರ್ಭದಲ್ಲಿ ಮನಸ್ಸು ನಕಾರಾತ್ಮಕವಾಗುತ್ತದೆ. ಆಗ ಎಲ್ಲ ಉತ್ತಮ ಹೊಡೆತಗಳು ಫೀಲ್ಡರ್‌ ಗಳ ಕೈಗೆ ನೇರವಾಗಿ ಹೋಗಿ ಡಾಟ್‌ ಬಾಲ್‌ಗಳನ್ನು ಹೆಚ್ಚಿಸುವ ಮೂಲಕ ಒತ್ತಡ ಹೆಚ್ಚುತ್ತದೆ. ಇದೇ ಕ್ರೀಡಾಂಗಣದಲ್ಲಿ ನಾನಾಡಿದ್ದ ಕುಖ್ಯಾತ ಇನಿಂಗ್ಸ್‌ ಅನ್ನು ಧೋನಿ ಆಟ ನೆನಪಿಸುತ್ತದೆ' ಎಂದು ಗವಾಸ್ಕರ್‌ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!