ಅರ್ಬಾಜ್ ಖಾನ್ 
ಕ್ರಿಕೆಟ್

ಐಪಿಎಲ್ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿದ್ದು ನಿಜ: ನಟ ಅರ್ಬಾಜ್ ಖಾನ್ ತಪ್ಪೊಪ್ಪಿಗೆ, ಕಳೆದುಕೊಂಡಿದ್ದು ರು.2.75 ಕೋಟಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರು ಐಪಿಎಲ್ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿರುವುದಾಗಿ.....

ಥಾಣೆ(ಮಹಾರಾಷ್ಟ್ರ): ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿರುವುದಾಗಿ ಒಪಿಕೊಂಡಿದ್ದಾರೆ.ಎಂದು ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಳೆದ ವರ್ಷದ ಐಪಿಎಲ್ ನಲ್ಲಿ 2.75 ಕೋಟಿ ರೂ. ಬೆಟ್ಟಿಂಗ್ ನಡೆಸಿದ್ದಾಗಿ  ಅವರು ವಿಚಾರಣೆ ವೇಳೆ ತಿಳಿಸಿದ್ದಾರೆ. ಥಾಣೆ ಅಪರಾಧ ವಿಭಾಗದ  ಪೋಲೀಸರು ಬೆಟ್ಟಿಂಗ್ ಕುರಿತು ತನಿಖೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದರು. 
ಈ ಸಂಬಂಧ ಮಾತನಾಡಿದ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ "ಇದಾಗಲೇ ಪೋಲೀಸರು ಈ ಕುರಿತು ತನಿಖೆ ನಡೆಸುತಿದ್ದಾರೆ. ಐಸಿಸಿ ಹಾಗು ಬಿಸಿಸಿಐ ಎರಡೂ ಸಂಸ್ಥೆಗ್ಳು ಭ್ರಷ್ಟಾಚಾರ ವಿರೋಧಿ ಘಟಕಗಳನ್ನು ಹೊಂದಿದೆ. ನಾವಿದರಲ್ಲಿ ಮಧ್ಯ ಪ್ರವೇಶಿಸುವುದಿಲ್ಲ" ಎಂದರು.
ಶುಕ್ರವಾರ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿ ಅರ್ಬಾಜ್ ಖಾನ್ ಅವರನ್ನು ವಿಚಾರಣೆ ನಡೆಸಲಾಗಿದ್ದು ಆ ವೇಳೆ ಅವರ ಹೇಳಿಕೆಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಗಿತ್ತು. ಹೈ ಪ್ರೋಪೈಲ್ ಬುಕ್ಕಿ  ಸೂನ್ ಜಲಾನ್   ವಿಚಾರಣೆ ವೇಳೆ  ಅರ್ಬಾಜ್ ಖಾನ್  ಹೆಸರು ಕೇಳಿಬಂದಿತ್ತು. ಠಾಣೆಯ ಅಪರಾಧ ವಿಭಾಗ ಅರ್ಬಾಜ್ ಖಾನ್ ಹೇಳಿಕೆ ದಾಖಲಿಸಲು  ಸಮನ್ಸ್ ನೀಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

SCROLL FOR NEXT