ಕೆಎಲ್ ರಾಹುಲ್-ನಿಧಿ ಅಗರವಾಲ್ 
ಕ್ರಿಕೆಟ್

ಬಾಲಿವುಡ್ ನಟಿ ನಿಧಿ ಅಗರವಾಲ್ ಜೊತೆ ಸುತ್ತಾಟಕ್ಕೆ ಕೆಎಲ್ ರಾಹುಲ್ ಕೊಟ್ಟ ಉತ್ತರ ಏನು ಗೊತ್ತಾ?

ಟೀಂ ಇಂಡಿಯಾದ ಆರಂಭಿಕ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಇತ್ತೀಚೆಗೆ ಬಾಲಿವುಡ್ ನಟಿ ನಿಧಿ ಅಗರವಾಲ್ ಜೊತೆ ಓಡಾಡುವಾಗ ಜನರ ಕಣ್ಣಿಗೆ ಬಿದ್ದಿದ್ದರು...

ಮುಂಬೈ: ಟೀಂ ಇಂಡಿಯಾದ ಆರಂಭಿಕ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಇತ್ತೀಚೆಗೆ ಬಾಲಿವುಡ್ ನಟಿ ನಿಧಿ ಅಗರವಾಲ್ ಜೊತೆ ಓಡಾಡುವಾಗ ಜನರ ಕಣ್ಣಿಗೆ ಬಿದ್ದಿದ್ದರು. 
ಕಳೆದ ಎರಡು ದಿನಗಳ ಹಿಂದೆ ಬೆಂಗಳೂರು ಮೂಲದ ಬಾಲಿವುಡ್ ನಟಿ ನಿಧಿ ಅಗರವಾಲ್ ಜತೆ ರಾಹುಲ್ ಕಾಣಿಸಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ ಕೆಎಲ್ ರಾಹುಲ್, ನಾವಿಬ್ಬರು ಉತ್ತಮ ಸ್ನೇಹಿತರಾಗಿದ್ದು ಹಲವು ವರ್ಷಗಳಿಂದ ಪರಸ್ಪರ ಪರಿಚಯವಿರುವ ಕಾರಣ ಭೇಟಿ ಮಾಡಿದ್ದೇವು ಎಂದು ಹೇಳಿದ್ದಾರೆ. 
ಇನ್ನು ನಿಧಿ ಅಗರವಾಲ್ ಜತೆ ಡೇಟಿಂಗ್ ಕುರಿತು, ತಾನು ಪ್ರೀತಿಸುವ ಮಹಿಳೆಯನ್ನು ಮಹಾರಾಣಿಯಾಗಿ ನೋಡಿಕೊಳ್ಳುತ್ತೇನೆ. ಅಲ್ಲದೆ ಆ ವಿಷಯವನ್ನು ಯಾರಿಂದಲೂ ಮುಚ್ಚಿಡಲು ಪ್ರಯತ್ನ ಮಾಡುವುದಿಲ್ಲ. ನಾವಿಬ್ಬರು ಒಂದೇ ನಗರದಿಂದ ಮುಂಬೈಗೆ ಬಂದವರು. ಇಬ್ಬರ ವೃತ್ತಿ ಜೀವನದಲ್ಲಿ ಸಾಕಷ್ಟು ಬೆಳವಣಿಗೆ ಹೊಂದುತ್ತಿದ್ದೇವೆ. ಹಲವು ಬಾರಿ ಈ ಕುರಿತು ಮಾತನಾಡಲು ಸಿಗುತ್ತೇವೆ ಎಂದು ಹೇಳಿದ್ದಾರೆ. 
ನಿಧಿ ಅಗರವಾಲ್ ಅವರು 2017ರಲ್ಲಿ ತೆರೆಕಂಡಿದ್ದ ಮುನ್ನ ಮೈಕಲ್ ಚಿತ್ರದಲ್ಲಿ ನಟಿಸಿ ಅಭಿಮಾನಿಗಳ ಹೃದಯ ಗೆದ್ದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಕೆ ನಿಷೇಧ; ಬೇಸಿಗೆಯಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಮಳೆಗಾಲದಲ್ಲೇ ಜಾರಿಗೊಳಿಸಿದ BWSSB!

1 ಓವರ್‌ನಲ್ಲಿ 29 ರನ್ ಹೊಡೆಸಿಕೊಂಡ ಬಿಷ್ಣೋಯ್: ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯ ಕೈಚೆಲ್ಲಿದ ಭಾರತ

ನಾನು ಸೋತಿದ್ದೇನೆ, ಸತ್ತಿಲ್ಲ: TMC ಕೇಂದ್ರ ಕಚೇರಿಗೆ ಬಿಗ... ಬಂಡಾಯ ನಾಯಕರ ವಿರುದ್ಧ ಮಮತಾ ಬ್ಯಾನರ್ಜಿ ಗರಂ

E20 Petrol: ವೈಜ್ಞಾನಿಕ ಪರೀಕ್ಷೆಗಳಲ್ಲಿ ಸುರಕ್ಷಿತ, ವಾಹನಗಳಿಗೆ ಅತ್ಯುತ್ತಮ; ತಜ್ಞರ ಸಮರ್ಥನೆ

ಮೆಲ್ಬೋರ್ನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ; ಆಸ್ಟ್ರೇಲಿಯಾದಿಂದ ತನಿಖೆ