ನ್ಯೂಯಾರ್ಕ್: ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಫೋರ್ಬ್ಸ್ ಪಟ್ಟಿಯಲ್ಲಿ ಅಮೆರಿಕಾದ ಬಾಕ್ಸಿಂಗ್ ಚಾಂಪಿಯನ್ ಪ್ಲೊಯಡ್ ಮೇ ವೇದರ್ ಅಗ್ರ ಕ್ರಮಾಂಕದಲ್ಲಿದ್ದು, ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡಾ ಸ್ಥಾನ ಪಡೆದಿದ್ದಾರೆ.
ಭಾರತದ ಕ್ರೀಡಾಪಟುಗಳಲ್ಲಿ ಕೊಹ್ಲಿ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ. 24 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ ಗಳಿಸುವ ಮೂಲಕ 83 ನೇ ಸ್ಥಾನದಲ್ಲಿದ್ದಾರೆ. ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳಲ್ಲಿ ಮಹಿಳೆಯರು ಇಲ್ಲದಿರುವುದು ಆಶ್ಚರ್ಯ ಮೂಡಿಸಿದೆ.
29 ವರ್ಷದ ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್ ಮಾತ್ರವಲ್ಲ, ವಿಶ್ವದ ಕ್ರೀಡಾಪಟುಗಳಲ್ಲಿಯೂ ಹೆಸರುವಾಸಿಯಾಗಿದ್ದಾರೆ. 25 ಮಿಲಿಯನ್ ಗೂ ಹೆಚ್ಚು ಟ್ವಿಟರ್ ಅನುಯಾಯಿಗಳನ್ನು ಹೊಂದಿದ್ದಾರೆ ಎಂದು ಪೋರ್ಬ್ಸ್ ಹೇಳಿದೆ.
41 ವರ್ಷದ ಅಮೆರಿಕಾದ ಬಾಕ್ಸಿಂಗ್ ಚಾಂಪಿಯನ್ ಮೇ ವೇದರ್ 285 ಡಾಲರ್ ಮಿಲಿಯನ್ ಆದಾಯ ಗಳಿಸುವ ಮೂಲಕ ಅಗ್ರ ಸ್ಥಾನ ಪಡೆದುಕೊಡಿದ್ದಾರೆ.
ಬಿಸಿಸಿಐ ಈ ವರ್ಷದ ಒಪ್ಪಂದದಂತೆ ವಿರಾಟ್ ಕೊಹ್ಲಿ ಸೇರಿದಂತೆ ಐವರನ್ನು A+ ಒಪ್ಪಂದದಂತೆ ತೆಗೆದುಕೊಂಡಿದ್ದು, ವಾರ್ಷಿಕ 1 ಮಿಲಿಯನ್ ಅಮೆರಿಕನ್ ಡಾಲರ್ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ.
ಮೈದಾನದ ಹೊರಗೆಯೂ ಕೊಹ್ಲಿ ದೊಡ್ಡ ಮೊತ್ತದ ಆದಾಯ ಗಳಿಸುತ್ತಿದ್ದಾರೆ. ಪೂಮಾ, ಫೆಪ್ಸಿ, ಆಡಿ, ಒಕ್ಲಿ ಸೇರಿದಂತೆ ಮತ್ತಿತರ ಕಂಪನಿಗಳ ರಾಯಬಾರಿಯಾಗಿಯೂ ವಿರಾಟ್ ಕೊಹ್ಲಿ ಅಧಿಕ ಸಂಪಾದನೆ ಗಳಿಸುತ್ತಿದ್ದಾರೆ.