ಬೆಂಗಳೂರು: ಟೀಂ ಇಂಡಿಯಾ ಹಾಗೂ ಆಫ್ಘಾನಿಸ್ತಾನ ನಡುವಿನ ಐತಿಹಾಸಿಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಫ್ಘಾನಿಸ್ತಾನ ವಿರುದ್ಧ 262 ರನ್ ಮತ್ತು ಇನ್ನಿಂಗ್ಸ್ ಜಯ ಸಾಧಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್ ಗಳಿಗೆ ಆಲ್ ಔಟ್ ಆಯಿತು. ನಂತರ ಇನ್ನಿಂಗ್ಸ್ ಆರಂಭಿಸಿದ ಆಫ್ಘಾನ್ ತಂಡ ಖ್ಯಾತ ಸ್ಪಿನ್ನರ್ ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ್ದು 109 ರನ್ ಗಳಿಗೆ ಆಲ್ ಔಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾದ 365 ರನ್ ಗಳ ಮುನ್ನಡೆ ಸಾಧಿಸಿತ್ತು.
ಭಾರತ ವಿರುದ್ಧ ಆಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್ ನಲ್ಲಿ ಅಲ್ಪಮೊತ್ತಕ್ಕೆ ಆಲ್ ಔಟ್ ಆಗಿದ್ದರಿಂದ ಫಾಲೋ ಆನ್ ಗೆ ಸಿಲುಕಿತ್ತು. ಮತ್ತೆ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಲಿರುವ ಆಫ್ಘಾನ್ 103 ರನ್ ಗಳಿಗೆ ಆಲೌಟ್ ಆಯಿತು.
ಮೊದಲ ಇನ್ನಿಂಗ್ಸ್ ನಲ್ಲಿ ಆಫ್ಘಾನ್ ಪರ ಮೊಹಮ್ಮದ್ ಶಹಜಾದ್ 14, ರಹಮತ್ ಶಾ 14, ಮೊಹಮ್ಮದ್ ನಬಿ 24 ಮತ್ತು ಮುಜೀಬ್ ಉರ್ ರಹಮಾನ್ 15 ರನ್ ಬಾರಿಸಿದ್ದಾರೆ.
ಟೀಂ ಇಂಡಿಯಾದ ಪರ ಬೌಲಿಂಗ್ ನಲ್ಲಿ ಆರ್ ಅಶ್ವಿನ್ 4, ರವೀಂದ್ರ ಜಡೇಜಾ ಮತ್ತು ಇಶಾಂತ್ ಶರ್ಮಾ 2 ಹಾಗೂ ಉಮೇಶ್ ಯಾದವ್ 1 ವಿಕೆಟ್ ಪಡೆದಿದ್ದಾರೆ.
ಟೀಂ ಇಂಡಿಯಾ ಪರ ಶಿಖರ್ ಧವನ್ 107, ಮುರಳಿ ವಿಜಯ್ 105, ಕೆಎಲ್ ರಾಹುಲ್ 54, ಚೇತೇಶ್ವರ ಪೂಜಾರಾ 35, ಅಜಿಂಕ್ಯ ರಹಾನೆ 10, ದಿನೇಶ್ ಕಾರ್ತಿಕ್ 4, ಹಾರ್ದಿಕ್ ಪಾಂಡ್ಯ 71, ಆರ್ ಅಶ್ವಿನ್ 18 ರನ್ ಬಾರಿಸಿದ್ದಾರೆ.
ಆಫ್ಘಾನ್ ಪರ ಯಾಮಿನ್ ಅಹ್ಮದ್‌ಜೈ 3, ವಫಾದಾರ್, ರಶೀದ್ ಖಾನ್ ತಲಾ 2 ವಿಕೆಟ್, ರೆಹಮನ್ ಮತ್ತು ಮೊಹಮ್ಮದ್ ನಬಿ ತಲಾ 1 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics