ಕ್ರಿಕೆಟ್

ಟೀಂ ಇಂಡಿಯಾ ಮುಂದಿನ 5 ವರ್ಷದಲ್ಲಿ ಬರೋಬ್ಬರಿ 203 ಪಂದ್ಯಗಳನ್ನು ಆಡಲಿದೆ!

Vishwanath S
ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮುಂಬರುವ ಕ್ರಿಕೆಟ್ ಟೂರ್ನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಟೀಂ ಇಂಡಿಯಾ ಮುಂದಿನ 5 ವರ್ಷಗಳ ಕಾಲ ಇತರ ಎಲ್ಲಾ ತಂಡಗಳಿಗಿಂತಲೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. 
ಜಗತ್ತಿನಲ್ಲಿ ಟೀಂ ಇಂಡಿಯಾ ಪಂದ್ಯಗಳಿಗೆ ಹೆಚ್ಚಿನ ಮನ್ನಣೆ ಇರುವುದರಿಂದ ಮಂದಿ ಐದು ವರ್ಷಗಳಲ್ಲಿ(2018-2023) ಬರೋಬ್ಬರಿ 203 ಕ್ರಿಕೆಟ್ ಪಂದ್ಯಗಳನ್ನು ಆಡಲಿದೆ. ಅದರಲ್ಲಿ 51 ಟೆಸ್ಟ್ ಪಂದ್ಯ, 83 ಏಕದಿನ ಪಂದ್ಯ ಹಾಗೂ 69 ಟಿ20 ಪಂದ್ಯಗಳಿವೆ. ನಂತರ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಇದೆ. ವಿಂಡೀಸ್ ತಂಡ ಒಟ್ಟಾರೆ 186 ಹಾಗೂ ಇಂಗ್ಲೆಂಡ್ ತಂಡ 175 ಪಂದ್ಯಗಳನ್ನು ಆಡಲಿದೆ. 
ತಂಡಗಳ ಪಂದ್ಯಗಳ ಪಟ್ಟಿ?
ಭಾರತ 203 ಪಂದ್ಯ: 51 ಟೆಸ್ಟ್‌, 83 ಏಕದಿನ, 69 ಟಿ20 
ವೆಸ್ಟ್‌‌ ಇಂಡೀಸ್‌‌ 186 ಪಂದ್ಯ: 43 ಟೆಸ್ಟ್‌‌‌, 75 ಏಕದಿನ, 68 ಟಿ20 .
ಇಂಗ್ಲೆಂಡ್‌‌ 175 ಪಂದ್ಯ: 59 ಟೆಸ್ಟ್‌‌, 66 ಏಕದಿನ, 50 ಟಿ20. 
ಆಸ್ಟ್ರೇಲಿಯಾ174 ಪಂದ್ಯ: 47 ಟೆಸ್ಟ್‌‌, 68 ಏಕದಿನ, 59 ಟಿ20. 
ಪಾಕಿಸ್ತಾನ 164 ಪಂದ್ಯ: 40 ಟೆಸ್ಟ್‌‌, 61 ಏಕದಿನ, 63 ಟಿ20. 
ದಕ್ಷಿಣ ಆಫ್ರಿಕಾ 160 ಪಂದ್ಯ: 38 ಟೆಸ್ಟ್‌‌, 66 ಏಕದಿನ, 56 ಟಿ20. 
ಶ್ರೀಲಂಕಾ 160 ಪಂದ್ಯ: 43 ಟೆಸ್ಟ್‌‌, 71 ಏಕದಿನ, 66 ಟಿ20. 
ಬಾಂಗ್ಲಾದೇಶ 160 ಪಂದ್ಯ: 44 ಟೆಸ್ಟ್‌‌, 59 ಏಕದಿನ, 57 ಟಿ20. 
ನ್ಯೂಜಿಲೆಂಡ್‌‌ 159ಪಂದ್ಯ: 38 ಟೆಸ್ಟ್‌‌, 62 ಏಕದಿನ, 59ಟಿ20. 
ಐರ್ಲೆಂಡ್‌‌ 142 ಪಂದ್ಯ: 13 ಟೆಸ್ಟ್‌‌, 64 ಏಕದಿನ, 65ಟಿ20.
ಜಿಂಬಾಬ್ವೆ 130 ಪಂದ್ಯ: 21 ಟೆಸ್ಟ್‌, 59ಏಕದಿನ, 50ಟಿ20.
ಅಫ್ಘಾನಿಸ್ತಾನ109ಪಂದ್ಯ: 13 ಟೆಸ್ಟ್‌, 51ಏಕದಿನ, 45ಟಿ20.
ನೆದರ್‌ಲ್ಯಾಂಡ್‌‌ 33ಪಂದ್ಯ: 24ಏಕದಿನ, 9ಟಿ20.
SCROLL FOR NEXT